ಭಟ್ಕಳ- ಕರ್ನಾಟಕ ರಣಧೀರರ ವೇಧಿಕೆ (ರಿ) ಬೆಂಗಳೂರು ಸಂಘಟನೆಯ ಭಟ್ಕಳ ಅಧ್ಯಕ್ಷರಾಗಿ ಸಾಮಾಜಿಕ ಹೋರಾಟಗಾರ ಮಂಜುನಾಥ.ಎಸ್. ನಾಯ್ಕ ಮುಂಡಳ್ಳಿ, ಭಟ್ಕಳ ಅವರನ್ನು ಆಯ್ಕೆ ಮಾಡಿ ಸಂಘಟನೆಯ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಸೂರಜ್ ನಾಯ್ಕ ಅಂಕೋಲಾ ಆದೇಶ ಹೊರಡಿಸಿದ್ದಾರೆ. ಮಂಜುನಾಥ ನಾಯ್ಕ ಅವರು ಕಳೆದ 20 ವರುಷಗಳಿಂದ ಭಟ್ಕಳ ದಲ್ಲಿ ಸಾಮಾಜಿಕ ಹೊರಟಗಾರರಾಗಿ ಹೋರಾಟ ಮಾಡುತ್ತ ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನ ಮಾಡುತ್ತಿದ್ದಾರೆ.
ನಾಡು ,ನುಡಿ ,ನೆಲ, ಜಲ , ಭಾಷೆ ಗಳಿಗೆ ದಕ್ಕೆ ಬಂದಾಗ ಸದಾ ಹೋರಾಟಕ್ಕೆ ಸಿದ್ಧವಾಗಿ ತಮ್ಮನ್ನು ಹೋರಾಟದಲ್ಲಿ ತೊಡಗಿಸಿಕೊಳ್ಳುವಂತೆ ತಿಳಿಸಿದ್ದಾರೆ. ಭ್ರಷ್ಟಾಚಾರ , ಅನ್ಯಾಯ ವಿರುದ್ಧ ಹೋರಾಟ ಮಾಡುವಂತೆ ತಿಳಿಸಿದ್ದಾರೆ. ಭಟ್ಕಳ ತಾಲೂಕಿನಲ್ಲಿ ಬಡವರ ಪರ ದ್ವನಿಯಾಗಿ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಿದ್ದಾರೆ. ಭಟ್ಕಳ ತಾಲೂಕಿನಲ್ಲಿ ಸಂಘಟನೆಯನ್ನು ಬಲಪಡಿಸುವಂತೆ ತಿಳಿಸಿದ್ದಾರೆ.
