Home Crime ಕಾಪು : ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ…!!

ಕಾಪು : ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ…!!

ಕಾಪು: ಉಡುಪಿ ಜಿಲ್ಲೆಯ ಕಾಪು ಸಮೀಪ ವ್ಯಕ್ತಿಯೋರ್ವರು ನೇಣು‌ ಬಿಗಿದುಕೊಂಡು‌ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.

ಮೃತಪಟ್ಟ ವ್ಯಕ್ತಿ ಜಗದೀಶ್ ಬಜಂತ್ರಿ ಎಂದು ತಿಳಿಯಲಾಗಿದೆ.

ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣ ಸಾರಾಂಶ : ಪಿರ್ಯಾದುದಾರ ಸಿದ್ದರಾಮ ಭಜಂತ್ರಿ, ಪ್ರಾಯ: 20 ವರ್ಷ , ತಂದೆ: ಸಾಯಬಣ್ಣ, ವಿಳಾಸ: ಸಿದ್ದರಾಮೇಶ್ವರ ದೇವಸ್ಥಾನದ ಹತ್ತಿರ, ಕೆರೂಟಗಿ, ಸಿಂದಗಿ ತಾಲೂಕು ಇವರ ಚಿಕ್ಕಪ್ಪ ಜಗದೀಶ್‌ ಬಜಂತ್ರಿ (33ವರ್ಷ) ರವರು ಮೂಲತಃ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕು ಕೆರೂಟಗಿ ಗ್ರಾಮದ ನಿವಾಸಿಯಾಗಿದ್ದು ಆಗಾಗ್ಗೆ ಉಡುಪಿಗೆ ಬಂದು ಉದ್ಯಾವರ ಗ್ರಾಮದ ಪರಿಸರದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು, ಜಗದೀಶ ಭಜಂತ್ರಿ ರವರು ಕೂಲಿ ಕೆಲಸದ ಸಲುವಾಗಿ ಒಂದು ವಾರದ ಹಿಂದೆ ಉಡುಪಿ ಜಿಲ್ಲೆ ಉಡುಪಿ ತಾಲೂಕು ಉದ್ಯವಾರ ಗ್ರಾಮಕ್ಕೆ ಬಂದಿದ್ದು ಉದ್ಯಾವರ ಪರಿಸರದಲ್ಲಿ ಕೆಲಸ ಮಾಡಿಕೊಂಡು ಉದ್ಯಾವರದ ಬಸ್ಸು ನಿಲ್ದಾಣದ ವಠಾರದಲ್ಲಿ ಮಲಗುತ್ತಿದ್ದು, ವಿಪರೀತ ಕುಡಿತದ ಚಟದಿಂದ ಅಥವಾ ಇನ್ನಾವುದೋ ಕಾರಣದಿಂದ ದಿನಾಂಕ: 2.10.2025 ರಂದು ಬೆಳಿಗ್ಗೆ 9:00 ಗಂಟೆಯಿಂದ ಮಧ್ಯಾಹ್ನ 15:00 ಗಂಟೆಯ ಮಧ್ಯಾವಧಿಯಲ್ಲಿ ಉಡುಪಿ ತಾಲೂಕು ಉದ್ಯಾವರ ಗ್ರಾಮದ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ಬಳಿ, ಎನ್.‌ ವಾಸುದೇವ ಹೆಗ್ಡೆ ವಿದ್ಯಾರಂಗ ಮಂಟಪದ ಹತ್ತಿರ ಇರುವ ಅಂಗನವಾಡಿ ಶಾಲೆಯ ಜಗಲಿಯ (ಕಾರಿಡಾರ್‌) ಮೇಲೆ ಹಾಕಿದ ತಗಡಿನ ಶೀಟ್‌ಗೆ ಅಡ್ಡಲಾಗಿ ಹಾಕಿದ ಕಬ್ಬಿಣದ ರಾಡ್‌ ಗೆ ನೈಲಾಲ್‌ ಹಗ್ಗದಿಂದ ನೇಣುಬಿಗಿದು ಮೃತಪಟ್ಟಿರುವುದಾಗಿದೆ.

ಈ ಬಗ್ಗೆ ಕಾಪು ಪೊಲೀಸ್ ಠಾಣಾ ಯು.ಡಿ.ಆರ್‌ ನಂಬ್ರ: 37/2025 ಕಲಂ: 194 BNSS ರಂತೆ ಪ್ರಕರಣ ದಾಖಲಿಸಲಾಗಿದೆ.