ಉಡುಪಿ : ನಗರದ ಸಮೀಪ ಟೆಂಪೋ ದಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವ ಮಾಹಿತಿ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಟೆಂಪೋ ವಾಹನದ ಮಾಲಕ ಮಣಿಪಾಲದ ಅರುಣ್ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ವಿವರ : ಪಿರ್ಯಾದಿದಾರ ಪರಮೇಶ್ವರ ಕೆ, ಸಹಾಯಕ ಪೊಲೀಸ್ ಉಪನಿರೀಕ್ಷಕರು , ಉಡುಪಿ ನಗರ ಪೊಲೀಸ್ ಠಾಣೆ, ಉಡುಪಿ ಇವರು ದಿನಾಂಕ:02/10/2025 ರಂದು ಮದ್ಯಾಹ್ನ 12:30 ಗಂಟೆಗೆ ಠಾಣಾ ಸಿಬ್ಬಂದಿಯವರೊಂದಿಗೆ ಉಡುಪಿ ತಾಲೂಕು ಪುತ್ತೂರು ಗ್ರಾಮದ ನಯಂಪಳ್ಳಿ ರೋಬೋಸಾಫ್ಟ್ ಬಳಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಂತೆಕಟ್ಟೆ ಕಡೆಯಿಂದ ಬರುತ್ತಿದ್ದ KA 20 D 8838 ನೋಂದಣಿ 407 ಸಂಖ್ಯೆಯ ಟೆಂಪೋ ವಾಹನವನ್ನು ತಡೆದು ಪರಿಶೀಲಿಸಿದಾಗ ಅದರಲ್ಲಿ ಅಂದಾಜು 1.5 ಯೂನಿಟ್ ಅಂದಾಜು ಮೌಲ್ಯ 3,500/- ರೂಪಾಯಿ ಮರಳಿದ್ದು, ಆರೋಪಿಯ ಬಳಿ ಮರಳು ಸಾಗಟದ ಬಗ್ಗೆ ಯಾವುದೇ ಪರವಾನಿಗೆ ಇಲ್ಲದೇ ಇದ್ದು, ಸದರಿ ಮರಳನ್ನು KA 20 D 8838 ನೋಂದಣಿ 407 ಸಂಖ್ಯೆಯ ಟೆಂಪೋ ವಾಹನದ ಮಾಲಕ ಮಣಿಪಾಲದ ಅರುಣ್ ರವರ ಸೂಚನೆಯಂತೆ ಉಪ್ಪೂರು ಅಪ್ಪಣ್ಣ ಕುದ್ರುವಿನ ನದಿಯ ತೀರ ಸರಕಾರಿ ಜಾಗದಲ್ಲಿ ರಾಶಿ ಹಾಕಿದ್ದ ಮರಳನ್ನು ಕಳವು ಮಾಡಿಕೊಂಡು ಉಡುಪಿಗೆ ಸಾಗಿಸುತ್ತಿರುವುದಾಗಿ ತಿಳಿಸಿರುವುದಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ :182/2025, ಕಲಂ: (U/s-303(2)BNS; (U/s-4(1A),21(4)) MMDR ರಂತೆ ಪ್ರಕರಣ ದಾಖಲಿಸಲಾಗಿದೆ