ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ಸಮೀಪ ವ್ಯಕ್ತಿಯೋರ್ವರು ಮನೆಯೊಳಗೆ ಹೋಗಿ ಹಾಲ್‌ನಲ್ಲಿ ಕಬ್ಬಿಣದ ಜಂತಿಗೆ ಲುಂಗಿ ಕಟ್ಟಿ ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮೃತಪಟ್ಟ ವ್ಯಕ್ತಿ ಸಂತೋಷ್ ಆಚಾರ್ಯ ಎಂದು ತಿಳಿಯಲಾಗಿದೆ.
ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ಸಾರಾಂಶ : ಪಿರ್ಯಾದಿ ಶ್ರೀಮತಿ ಸುಪ್ರಿತಾ ಪ್ರಾಯ 34 ವರ್ಷ, ನಂದಳಿಕೆ ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ದಾರರ ಗಂಡ ಸಂತೋಷ ಆಚಾರ್ಯರವರು ಕೂಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ 30/09/2025 ರಂದು ಪ್ರತಿವರ್ಷದಂತೆ ಮನೆಯಲ್ಲಿ ನವರಾತ್ರಿ ಪೂಜೆ ನಡೆಯುತ್ತಿದ್ದು, ಸಂತೋಷ ಆಚಾರ್ಯರವರು ಮದ್ಯಪಾನ ಮಾಡಿದ್ದರಿಂದ ಅವರ ಅಣ್ಣ ರಾಮಚಂದ್ರ ರವರ ಮಗ ದೀಪಕ್‌ರವರು ಪೂಜೆಗೆ ಕುಳಿತಿದ್ದರು. ಪೂಜೆ ಮುಗಿದ ನಂತರ ಎಲ್ಲರೂ ಅವರವರ ಕೆಲಸದಲ್ಲಿದ್ದು ಸಂತೋಷ ಆಚಾರ್ಯ ರವರು 17:15 ಗಂಟೆಗೆ ಒಮ್ಮಲೇ ಮನೆಯೊಳಗೆ ಹೋಗಿ ಹಾಲ್‌ನಲ್ಲಿ ಕಬ್ಬಿಣದ ಜಂತಿಗೆ ಲುಂಗಿ ಕಟ್ಟಿ ಕುತ್ತಿಗೆಗೆ ನೇಣು ಹಾಕಿಕೊಂಡಿದ್ದನ್ನು 17:30 ಗಂಟೆಗೆ ನೋಡಿ ಕೂಡಲೇ ನೇಣಿನಿಂದ ಇಳಿಸಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆತಂದಾಗ ಪರೀಕ್ಷಿಸಿದ ವೈದ್ಯರು ಸಂತೋಷ ಆಚಾರ್ಯ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ಠಾಣೆ ಯು.ಡಿ.ಆರ್ 47/2025 ಕಲಂ:194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.