ಉಡುಪಿ : ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಇವರ ನೇತೃತ್ವದಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ಇಂದು ಗಾಂಧಿ ಜಯಂತಿ ಆಚರಣೆ ಉದ್ಯಾವರ ಗ್ರಾಮ ಪಂಚಾಯತ್ ನಲ್ಲಿ ನಡೆಸಲಾಯಿತು.
ಈ ಪ್ರಯುಕ್ತ ಉದ್ಯಾವರ ಗ್ರಾಮ ಪಂಚಾಯತ್ ನಲ್ಲಿ ಮತ್ತು ವ್ಯಾಪ್ತಿಯ ಸ್ವಚ್ಛತೆಯ ಸಿಬ್ಬಂದಿಗಳಾದ ಅನಸೂಯ, ನಯಾಜ್, ಜನಾರ್ಧನ್ ಅವರ ಸೇವೆಯನ್ನು ಗುರುತಿಸಿ, ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ ಸಂದೀಪ್, ಗ್ರಾಮ ಪಂಚಾಯತ್ ಸದಸ್ಯರಾದ ರಿಯಾಜ್ ಪಳ್ಳಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆರ್ ರಮೇಶ್, ಭೂ ನ್ಯಾಯಮಂಡಳಿ ಸದಸ್ಯ ರೊಯ್ಸ್ ಫೆರ್ನಾoಡಿಸ್, ಸಹಾಯಕ ಲೆಕ್ಕಾಧಿಕಾರಿ ಕಲ್ಲಪ್ಪ, ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ನಾರಾಯಣ, ರಶ್ಮಿತಾ, ಅರ್ಚನ, ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಅಧ್ಯಕ್ಷ ಲ. ಜೆರಾಲ್ಡ್ ಪಿರೇರಾ, ಕಾರ್ಯದರ್ಶಿ ಲ. ಎಡ್ವಿನ್ ಲೂವಿಸ್, ಕೋಶಾಧಿಕಾರಿ ಲ. ಆಲ್ವಿನ್ ಡಿಸೋಜಾ, ನಿಕಟಪೂರ್ವ ಅಧ್ಯಕ್ಷ ಲ. ರೊನಾಲ್ಡ್ ರೆಬೆಲ್ಲೊ, ಜಿಲ್ಲಾ ಲಯನ್ಸ್ ಕ್ಯಾಬಿನೆಟ್ ಸದಸ್ಯರಾದ ಲ. ಜೋನ್ ಫೆರ್ನಾoಡಿಸ್, ಲ. ಸ್ಟೀವನ್ ಕುಲಾಸೊ, ಪ್ರಮುಖರಾದ ಫ್ರಾಂಕಿ ಕರ್ಡೋಜ, ಹರಿಶ್ಚಂದ್ರ, ಗ್ರಾಮ ವನ್ ಸಂಚಾಲಕಿ ಸೌಮ್ಯ ಉದ್ಯಾವರ ಸಹಿತ ಮತ್ತಿತರರು ಉಪಸ್ಥಿತರಿದ್ದರು.
ಲ. ಮೈಕಲ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.

