Home Crime ಉಡುಪಿ: ವಿದ್ಯುತ್ ಶಾಕ್ : ಬೈಲೂರಿನ ಫ್ಯಾಕ್ಟರಿ ಮಾಲೀಕ ಸಾವು…!!

ಉಡುಪಿ: ವಿದ್ಯುತ್ ಶಾಕ್ : ಬೈಲೂರಿನ ಫ್ಯಾಕ್ಟರಿ ಮಾಲೀಕ ಸಾವು…!!

ಉಡುಪಿ: ಬೈಲೂರಿನ ಸುನೀತಾ ಹೊಲೋ ಬ್ಲಾಕ್ ಮಾಲೀಕ ಸುನಿಲ್ ಸೋನ್ಸ್ (45) ಅವರು ವಿದ್ಯುತ್ ಅವಘಡದಲ್ಲಿ ಮೃತಪಟ್ಟಿದ್ದಾರೆ. ಸೋಮವಾರ ಸಂಜೆ ಅವಘಡ ಸಂಭವಿಸಿದೆ.

ಬೈಲೂರಿನಲ್ಲಿರುವ ಸುನೀತಾ ಹೊಲೋ ಬ್ಲಾಕ್ ನಲ್ಲಿ ಎಂದಿನಂತೆ ಕೆಲಸ ನಿರ್ವಹಿಸುತ್ತಿದ್ದಾಗ ಅವರು ವಿದ್ಯುತ್ ಶಾಕ್‌ಗೆ ಒಳಗಾಗಿದ್ದರು. ತಕ್ಷಣವೇ ಸ್ಥಳೀಯರು ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಪರೀಕ್ಷಿಸಿದ ವೈದ್ಯರು ಸುನಿಲ್ ಅವರು ಅದಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಮೃತರು ಪತ್ನಿ ಮತ್ತು ಓರ್ವ ಪುತ್ರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.