Home Crime ಪಡುಬಿದ್ರಿ : ರಸ್ತೆ ಅಪಘಾತ : ಸ್ಕೂಟರ್ ಸವಾರ ಸಾವು…!!

ಪಡುಬಿದ್ರಿ : ರಸ್ತೆ ಅಪಘಾತ : ಸ್ಕೂಟರ್ ಸವಾರ ಸಾವು…!!

ಪಡುಬಿದ್ರಿ: ಉಡುಪಿ ಜಿಲ್ಲೆಯ ಪಡುಬಿದ್ರಿ‌ ಸಮೀಪ ಸ್ಕೂಟರ್ ಸವಾರ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ‌ಮೃತಪಟ್ಟ ಘಟನೆ ನಡೆದಿದೆ.

ಸಾವನ್ನಪ್ಪಿದವರು ಕಿರಣ್ ಎಂದು ತಿಳಿದು ಬಂದಿದೆ.

ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ: ದಿನಾಂಕ 11/07/2026 ರಂದು ಪಿರ್ಯಾದಿದಾರರಾದ ಮಲ್ಲಿಕಾರ್ಜುನ್‌ ಆರ್‌ ಕೆ (50) ತಂದೆ: ದಿ ರುದ್ರಪ್ಪ ವಾಸ: 19-110 ಬಿಜಾಪುರ ಕಾಲೋನಿ, ಲಿಂಗಪ್ಪಯ್ಯಕಾಡು, ಕೆ ಎಸ್‌ ರಾವ್‌ ನಗರ ಕಾರ್ನಾಡ್‌ ಗ್ರಾಮ ಮುಲ್ಕಿ ಇವರ ಮಗ ಕಿರಣ್‌ ರವರು ಪಡುಬಿದ್ರಿ ಕಡೆಯಿಂದ ನಂದಿಕೂರು ಕಡೆಗೆ ಪಡುಬಿದ್ರಿ ಕಾರ್ಕಳ ರಾಜ್ಯ ಹೆದ್ದಾರಿ 01 ರಲ್ಲಿ KA-19 HW-6956 ನೇ ನಂಬ್ರದ ಸ್ಕೂಟರನ್ನು ಸವಾರಿ ಮಾಡಿಕೊಂಡು ಹೋಗುವಾಗ ಸಮಯ ಸುಮಾರು 22:00 ಗಂಟೆಗೆ ಕಾಪು ತಾಲೂಕು ನಂದಿಕೂರು ಗ್ರಾಮದ ನಂದಿಕೂರು ಬಸ್‌ ನಿಲ್ದಾಣದ ಎದುರು ನಿರ್ಲಕ್ಷತನದಿಂದ ಸವಾರಿ ಮಾಡಿದ್ದರಿಂದ ನಿಯಂತ್ರಣ ತಪ್ಪಿ ಸವಾರ ಕಿರಣ್‌ ರವರು ಸ್ಕೂಟರ್‌ ಸಮೇತ ಡಾಮಾರು ರಸ್ತೆಗೆ ಬಿದ್ದು ತಲೆಗೆ ತೀವ್ರ ತರಹದ ಗಾಯಗಳಾಗಿದ್ದ ಅಲ್ಲಿ ಸೇರಿದ್ದ ಸಾರ್ಜನಿಕರು ಪಿರ್ಯಾದಿದಾರರಗೆ ಅಪಘಾತದ ಬಗ್ಗೆ ಮಾಹಿತಿ ತಿಳಿಸಿದಂತೆ ಪಿರ್ಯಾದಿದಾರರು ಅಪಘಾತ ಸ್ಥಳಕ್ಕೆ ಬಂದಾಗ ಅಲ್ಲಿಗೆ ಬಂದ ಆಂಬ್ಯುಲೆನ್ಸ್‌ ಪ್ರಾಥಮಿಕ ಆರೋಗ್ಯ ಕೇಂದ್ರ ಪಡುಬಿದ್ರಿಗೆ ಕಳುಹಿಸಿಕೊಟ್ಟಿದ್ದು ಹಾಗೂ ಮಗ ಕಿರಣನ ತಲೆಗೆ ಆದ ತೀವ್ರ ತರಹದ ಗಾಯಗಳಿಂದ ಮೃತಪಟ್ಟಿರುವುದಾಗಿ ಸಾರ್ವಜನಿಕರಿಂದ ತಿಳಿದುಕೊಂಡಿರುವುದಾಗಿದೆ. ಈ ಅಪಘಾತಕ್ಕೆ ಸ್ಕೂಟರನ್ನು ಅದರ ಸವಾರ ಕಿರಣ ಎಂಬವರ ನಿರ್ಲಕ್ಷತನದಿಂದ ಸವಾರಿ ಮಾಡಿದ್ದರಿಂದ ಸ್ಕೂಟರ್‌ ನಿಯಂತ್ರಣದ ತಪ್ಪಿ ಸವಾರನು ಸ್ಕೂಟರ್‌ ಸಮೇತ ಡಾಮಾರು ರಸ್ತೆಗೆ ಬಿದ್ದು ಮೃತಪಟ್ಟಿರುವುದಾಗಿದೆ.

ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 81/2026 ಕಲಂ: 281, 106(1) ಬಿ ಎನ್‌ ಎಸ್ ರಂತೆ ಪ್ರಕರಣ ದಾಖಲಾಗಿರುತ್ತದೆ.