ಅಮಾಸೆಬೈಲು: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ ಅಮಾಸೆಬೈಲು ಎಂಬಲ್ಲಿ ವಾಹನದಲ್ಲಿ ಹಿಂಸಾತ್ಮಕ ರೀತಿಯಲ್ಲಿ ಜಾನುವಾರು ಸಾಗಾಟಾ ಮಾಡುತ್ತಿರುವಾಗ ಪೊಲೀಸರು ಚಾಲಕ ಸಹಿತ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಪ್ರಕರಣದ ವಿವರ: ದಿನಾಂಕ 11/07/2026 ರಂದು ಪಿರ್ಯಾದಿದಾರರಾಧ ವಿನೋದ ಬಿ ಬಾಗಣ್ಣನವರ ಸಿ ಪಿ ಸಿ 195 ಅಮಾಸೆಬೈಲು ಪೊಲೀಸ್ ಇವರು ಕುಂದಾಪುರ ತಾಲೂಕು ಹೊಸಂಗಡಿ ಗ್ರಾಮದ ಹೊಸಂಗಡಿ ಚೆಕ್ ಪೋಸ್ಟ್ ನಲ್ಲಿ ಜೀವನ್.ಕೆ. ಅವರೊಂದಿಗೆ ರಾತ್ರಿ ಪಾಳಿ ಕರ್ತವ್ಯ ನಿರ್ವಹಿಸಿಕೊಂಡಿರುವಾಗ ದಿನಾಂಕ 11/07/2026 ರಂದು 21:10 ಗಂಟೆಗೆ ಹುಲಿಕಲ್ ಘಾಟಿ ಕಡೆಯಿಂದ ಚೆಕ್ ಪೊಸ್ಟ್ ಕಡೆಗೆ ಬರುತ್ತಿದ್ದ KA-17 AB-0194 ನೇ TATA Ace ಮತ್ತು KA-17 AA-2598 ನೇ TATA Intra ವಾಹನವನ್ನು ನೋಡಿ ತಡೆದು ನಿಲ್ಲಿಸಿ ತಪಾಸಣೆ ಮಾಡಿದಾಗ ಎರಡು ವಾಹನದ ಹಿಂದುಗಡೆ ಬಾಡಿಯಲ್ಲಿ ಎರಡು ಜಾನುವಾರುಗಳಿಗೆ (ಹೆಣ್ಣು ಹಸು) ಯಾವುದೇ ಮೇವು ಅಹಾರ ನೀಡದೆ ಒಂದಕೊಂದು ತಾಗಿಕೊಂಡು ಹಿಂಸ್ಮಾಕವಾಗಿ ಕಟ್ಟಿ ಹಾಕಿ ತುಂಬಿರುವುದು ಕಂಡು ಚಾಲಕನಲ್ಲಿ ಈ ಬಗ್ಗೆ ವಿಚಾರಿಸಲಾಗಿ ಸದ್ರಿ ಜಾನುವಾರುಗಳನ್ನು ಯಾವುದೇ ದಾಖಲೆ ಇಲ್ಲದೆ ನಾವುಂದ ತೌಫೀಕ ಅಬ್ದುಲ್ ಸಾಹೇಬರ ಫಾರಂ ಹೌಸಗೆ ಕೊಂಡು ಹೋಗುತ್ತಿರುವುದಾಗಿ ವಾಹನದಲ್ಲಿದ್ದವರು ತಿಳಿಸಿರುತ್ತಾರೆ. ನಾಲ್ಕು ಜಾನುವಾರುಗಳ ಅಂದಾಜು ಮೌಲ್ಯ 4,00,000/- ಮತ್ತು TATA Ace ವಾಹನದ ಮೌಲ್ಯ 05 ಲಕ್ಷ ಮತ್ತು TATA Intra ವಾಹನದ ಮೌಲ್ಯ 04 ಲಕ್ಷ ರೂಪಾಯಿಗಳಾಗಬಹುದು. ಸದ್ರಿ ವಾಹನದಲ್ಲಿ ಇದ್ದ ಆಪಾದಿತರುಗಳು ಸೇರಿಕೊಂಡು ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕೊಂಡು ಹೋಗುತ್ತ್ತಿದ್ದುದರಿಂದ ಅವರ ತಪ್ಪಿತ್ವದ ತಿಳುವಳಿಕೆ ನೀಡಿ ಸದ್ರಿ ಜಾನುವಾರು ಅವುಗಳನ್ನು ತಂದ ವಾಹನ ಸಮೇತ ವಾಹನದಲ್ಲಿದ್ದವರನ್ನು ವಶಕ್ಕೆ ಪಡೆದುಕೊಂಡಿರುವುದಾಗಿದೆ.
ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 13/2026 ಕಲಂ: 11(1) (d) Prevention of Cruelty to animal ActAnd 66(1)R/W 192 (A) IMV Act ರಂತೆ ಪ್ರಕರಣ ದಾಖಲಾಗಿರುತ್ತದೆ.




