Home Crime ಮಹಿಳೆಯೊಬ್ಬರ ಕ್ರೆಡಿಟ್ ಕಾರ್ಡ್ ನಿಂದ ಲಕ್ಷಾಂತರ ರೂ. ಎಗರಿಸಿದ ಖದೀಮರು…!!

ಮಹಿಳೆಯೊಬ್ಬರ ಕ್ರೆಡಿಟ್ ಕಾರ್ಡ್ ನಿಂದ ಲಕ್ಷಾಂತರ ರೂ. ಎಗರಿಸಿದ ಖದೀಮರು…!!

ಉಡುಪಿ: ಮಹಿಳೆಯೊಬ್ಬರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಗಳು ಐಮೊಬೈಲ್​ ಆ್ಯಪ್​ ಮೂಲಕ ಐಸಿಐಸಿಐ ಬ್ಯಾಂಕ್​ ಕ್ರೆಡಿಟ್​ ಹಾಗೂ ಡೆಬಿಟ್​ ಕಾರ್ಡನಿಂದ ಒಟ್ಟು 4,31,697 – ರೂ. ಹಣವನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ.

ಮಣಿಪಾಲದ ಬೇಬಿ ಎಸ್. (55) ಇವರಿಗೆ ಗುರುವಾರ ಸಾಯಂಕಾಲ ಐಸಿಐಸಿಐ ಕ್ರೆಡಿಟ್ ಕಾರ್ಡ್ ಎಂಬ ಹೆಸರಿನಿಂದ ಕರೆ ಬಂದಿದ್ದು, ಕರೆಯನ್ನು ಸ್ವೀಕರಿಸಿದ ಸ್ವಲ್ಪ ಹೊತ್ತಿನ ಬಳಿಕ ಸ್ವಯಂಚಾಲಿತವಾಗಿ ಮೊಬೈಲ್ನಲ್ಲಿ ಅಪರಿಚಿತ ಆ್ಯಪ್ ಇನ್ಸ್ಟಾಲ್ ಆಗಿದೆ. ನಂತರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಸ್ವಲ್ಪ ಸಮಯದ ಬಳಿಕ ಮಹಿಳೆಯ ಬ್ಯಾಂಕ್ ಖಾತೆ ಕ್ರೆಡಿಟ್ ಕಾರ್ಡನಿಂದ 294800 ಮತ್ತು 129900 ರೂ. ಹಾಗೂ ಡೆಬಿಟ್ ಕಾರ್ಡನಿಂದ 2000 -ರೂ,, 999 ರೂ, 1999 ರೂ., 1999 -ರೂ ಹಣ ಕಡಿತಗೊಂಡಿದೆ. ತಕ್ಷಣ ಬ್ಯಾಂಕ್ಗೆ ಕರೆ ಮಾಡಿ ಖಾತೆಯನ್ನು ಸ್ಥಗಿತಗೊಳಿಸಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.