ಬಂಟ್ವಾಳ : ಅಕ್ರಮವಾಗಿ ಮಧ್ಯ ದಾಸ್ತಾನು ಇರಿಸಿ ಮಾರಾಟ ಮಾಡುತ್ತಿದ್ದ ಅಂಗಡಿಯೊಂದಕ್ಕೆ ಬಂಟ್ವಾಳ ಗ್ರಾಮಾಂತರ ಠಾಣಾ ಪೋಲೀಸರು ದಾಳಿ ನಡೆಸಿದ ಘಟನೆ ಸಿದ್ದಕಟ್ಟೆ ಎಂಬಲ್ಲಿ ನಡೆದಿದೆ.
ಸಂಗಬೆಟ್ಟು ಗ್ರಾಮದ ಸಿದ್ದಕಟ್ಟೆ, ಅಜ್ಜಿ ಬಾಕಿಮಾರು ಸೂರ್ಯಚಂದ್ರಜನರಲ್ ಸ್ಟೋರ್ ಮಾಲಕಿ ಸುಜಾತ ಶೆಟ್ಟಿ ಎಂಬವರ ಮೇಲೆ ಪ್ರಕರಣ ದಾಖಲಾಗಿದೆ.
ಅವರು ಅಂಗಡಿಯಲ್ಲಿ ಪರವಾನಗಿ ಇಲ್ಲದೆ ಮಧ್ಯ ಮಾರಾಟ ಮಾಡುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೋಲಿಸರು ದಾಳಿ ಮಾಡಿದ್ದಾರೆ. ಸುಮಾರು 1250 ರೂಪಾಯಿ ಮೌಲ್ಯದ 2.25 ಲೀಟರ್ ಮಧ್ಯ ಇರುವ ಒಟ್ಟು 25 ಸ್ಲಾಚೆಟ್‌ಗಳನ್ನು ದಾಳಿಯ ವೇಳೆ ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ದಾಳಿ ನಡೆಸಿ ಪರಿಶೀಲಿಸಿದಾಗ ಅಂಗಡಿ ಕೋಣೆಯ ಕ್ಯಾಶ್ ಕೌಂಟರ್‌ನ ಕೆಳಗಿನ ಲಾಕರ್‌ನಲ್ಲಿ ಮಧ್ಯದ ಸ್ಲಾಚೆಟ್‌ಗಳು ಪತ್ತೆಯಾಗಿದ್ದು, 90 ಎಂ.ಎಲ್. ಸಾಮರ್ಥ್ಯದ ಪ್ರೆಸ್ಟೀಜ್ ವಿಸ್ಕಿ, 8 ಸ್ಲಾಚೆಟ್, ಒರಿಜನಲ್ ಚಾಯ್ಸ್ 6 ಸ್ಲಾಚೆಟ್ ಸೇರಿದಂತೆ ಹಲವಾರು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.