ಕುಂದಾಪುರ: ಕಳೆದ ಹಲವು ತಿಂಗಳಿಂದ ಕುಂದಾಪುರ ಪುರಸಭೆ ವ್ಯಾಪ್ತಿಯ ಕೋಡಿ ಭಾಗದಲ್ಲಿ ಹೊಳೆಯ ಬದಿಗೆ ಅಕ್ರಮವಾಗಿ ಮಣ್ಣು ತುಂಬಿಸಿ ಭೂ ಮಾಫಿಯಾ ದಂಧೆ ಹೊನ್ನಾರ ನಡೆಯುತ್ತಿದೆ ಎಂದು ಸ್ಥಳೀಯ ಸಾರ್ವಜನಿಕರು ಹೇಳಿದ್ದಾರೆ.
ಕುಂದಾಪುರ – ಕೋಡಿ ಸಂಪರ್ಕಿಸುವ ಮುಖ್ಯರಸ್ತೆಯ ಭಾಗದ ಶಿವಾಲಯ ರಸ್ತೆ ಸಮೀಪದ ನಾಗ ಜಟ್ಟಿಗೇಶ್ವರ ದೇವಸ್ಥಾನದ ಮುಂಭಾಗದ ಹೊಳೆಗೆ ಅಕ್ರಮವಾಗಿ ಮಣ್ಣು ತುಂಬಿಸಿ ಭೂ ಮಾಫಿಯಾ ನಡೆಸುವ ಉನ್ನಾರ ನಡೆದಿದೆ ಎನ್ನಲಾಗಿದೆ, ಹಾಗೆ ಇದೇ ಜಾಗದಲ್ಲಿ ಬೋಟ್ ಬಿಲ್ಡಿಂಗ್ ಇದು ಪುರಸಭೆಯ ಯಾವುದೇ ಪರವನಿಗೆ ಪಡೆಯಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ,
ಹೌದು ಈ ಭೂ ಮಾಫಿಯಾ ನಡೆಸಲು ಪುರಸಭೆ ಅಧಿಕಾರಿಗಳು, ಕಂದಾಯ ಇಲಾಖೆಯವರು, ಅರಣ್ಯ ಇಲಾಖೆಯವರು, ಹಾಗೂ ಸಂಬಂಧಪಟ್ಟ ಇಲಾಖೆಯವರು ಕಣ್ಣಿದ್ದು ಕುರುಡರಾಗಿ ವರ್ತಿಸುತ್ತಿರುವುದು ನೋಡಿದರೆ ಎಲ್ಲರೂ ಕಾಣದ ಕಣ್ಣಿಗೆ ಕೈ ಗೊಂಬೆ ಆಗಿದ್ದಾರೆ ಎಂಬ ಪ್ರಶ್ನೆ ಚರ್ಚೆಯಾಗುತ್ತಿದೆ
ತಕ್ಷಣ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಬೇಕೆನ್ನುವುದೇ ಸ್ಥಳೀಯ ಸಾರ್ವಜನಿಕರ ಆಶಯ…

