Home Karavali Karnataka ₹1.20 ಕೋಟಿ ವೆಚ್ಚದಲ್ಲಿ ಕೊರಗ ಸಮುದಾಯದ ಮಲ್ಟಿ ಪರ್ಪಸ್ ಸೆಂಟರ್ ಕಾಮಗಾರಿಗೆ ಶಾಸಕ ಯಶ್ ಪಾಲ್...

₹1.20 ಕೋಟಿ ವೆಚ್ಚದಲ್ಲಿ ಕೊರಗ ಸಮುದಾಯದ ಮಲ್ಟಿ ಪರ್ಪಸ್ ಸೆಂಟರ್ ಕಾಮಗಾರಿಗೆ ಶಾಸಕ ಯಶ್ ಪಾಲ್ ಸುವರ್ಣ ಶಿಲಾನ್ಯಾಸ…!!

ಉಡುಪಿ : ವಿಧಾನಸಭಾ ಕ್ಷೇತ್ರದ ಕಳ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬುಕ್ಕಿಗುಡ್ಡೆ ಮತ್ತು ಕಲ್ಲುಗುಡ್ಡೆ ಕೊರಗರ ಕಾಲನಿಯಲ್ಲಿ ₹ 1.20 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಮಲ್ಟಿ ಪರ್ಪಸ್ ಸೆಂಟರ್ ಕಾಮಗಾರಿಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಶಿಲಾನ್ಯಾಸ ನೆರವೇರಿಸಿದರು.

ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಶಾಸಕ ಯಶ್ ಪಾಲ್ ಸುವರ್ಣ ಕೇಂದ್ರ ಸರಕಾರ ಕೊರಗ ಸಮುದಾಯವನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಕಳ್ತೂರು ಗ್ರಾಮಕ್ಕೆಮಂಜೂರು ಗೊಂಡಿರುವ ಎರಡು ಮಲ್ಟಿ ಪರ್ಪಸ್ ಸೆಂಟರ್ ನಲ್ಲಿ ಅಂಗನವಾಡಿ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಮುದಾಯ ಭವನ, ಆರೋಗ್ಯ ಉಪ ಕೇಂದ್ರ, ಗ್ರಂಥಾಲಯವನ್ನು ಒಳಗೊಂಡಿದ್ದು ತಲಾ 60 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ. ಈ ಮಲ್ಟಿ ಪರ್ಪಸ್ ಸೆಂಟರ್ ಮೂಲಕ ಕೊರಗ ಸಮುದಾಯದ ಸಮಗ್ರ ಅಭಿವೃದ್ಧಿಗೆ ಶಕ್ತಿ ತುಂಬಲಿದೆ ಎಂದರು.

ಈ ಸಂದರ್ಭದಲ್ಲಿ ಕಳ್ತೂರು‌ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನವೀನ್ ಕುಮಾರ್, ಉಪಾಧ್ಯಕ್ಷರಾದ ರಮಾನಂದ ಶೆಟ್ಟಿ, ಗ್ರಾಮಾಂತರ ಬಿಜೆಪಿ ಅಧ್ಯಕ್ಷರಾದ ರಾಜೀವ್ ಕುಲಾಲ್, ಸ್ಥಳೀಯ ಪ್ರಮುಖರಾದ ಆದರ್ಶ ಶೆಟ್ಟಿ ಕೆಂಜೂರು, ದಿನೇಶ ಶೆಟ್ಟಿ, ನಾಗೇಶ್ ನಾಯ್ಕ್, ಉಷಾ ಪೂಜಾರಿ, ಸುಕನ್ಯ ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸವಿತಾ ಸ್ಥಳೀಯರಾದ ಹರೀಶ್ ಶೆಟ್ಟಿ, ಸತೀಶ ಶೆಟ್ಟಿ, ಶೇಖರ ಕಲ್ಲುಗುಡ್ಡೆ, ಗೌರಿ ಕಲ್ಲುಗುಡ್ಡೆ, ಮನೋಜ್ ಶೆಟ್ಟಿ,ವಿನುತ್ ಶೆಟ್ಟಿ, ನವೀನ್ ಪುತ್ರನ್, ಅಜಿತ್ ಹೆಗ್ಡೆ, ದಿವಾಕರ ಕಳ್ತೂರು, ರವೀಂದ್ರ ಪೂಜಾರಿ, ಅಶೋಕ್ ಶೆಟ್ಟಿ, ಸದಾನಂದ ಪೂಜಾರಿ, ಸುಂದರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.