Home Crime ಪಿ.ಐ.ಟಿ. ಎನ್.ಡಿ.ಪಿ.ಎಸ್. ಕಾಯ್ದೆಯಡಿಯ ಬಂಧನ ಆದೇಶವನ್ನು ಸ್ಥಿರೀಕರಿಸಿದ ಹೈಕೋರ್ಟ್‌‌..‌!!

ಪಿ.ಐ.ಟಿ. ಎನ್.ಡಿ.ಪಿ.ಎಸ್. ಕಾಯ್ದೆಯಡಿಯ ಬಂಧನ ಆದೇಶವನ್ನು ಸ್ಥಿರೀಕರಿಸಿದ ಹೈಕೋರ್ಟ್‌‌..‌!!

ಉಡುಪಿ : ಪಿ.ಐ.ಟಿ. ಎನ್.ಡಿ.ಪಿ.ಎಸ್. ಕಾಯ್ದೆಯಡಿಯ ಬಂಧನ ಆದೇಶವನ್ನು  ಹೈಕೋರ್ಟ್‌‌ ಸ್ಥಿರೀಕರಿಸಿದೆ ಎಂದು ತಿಳಿದು ಬಂದಿದೆ.

ಆರೋಪಿ ಕೃಷ್ಣ ಆಚಾರಿ ಅಲಿಯಾಸ್‌ ಕೃಷ್ಣ ಜಲಗಾರ ಎಂದು ತಿಳಿಯಲಾಗಿದೆ.

ಪ್ರಕರಣದ ಸಾರಶ : ಮಾದಕ ದ್ರವ್ಯ ಸಾಗಾಟ ಮತ್ತು ಮಾರಾಟ ಪ್ರಕರಣಗಳಲ್ಲಿ ನಿರಂತರವಾಗಿ ಭಾಗಿಯಾಗಿ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡಹುತ್ತಿದ್ದ ಆರೋಪಿ ಬ್ರಹ್ಮಾವರ ಠಾಣಾ ಸರಹದ್ದಿನ ಕೃಷ್ಣ ಆಚಾರಿ ಅಲಿಯಾಸ್‌ ಕೃಷ್ಣ ಜಲಗಾರ ಪ್ರಾಯ 43 ವರ್ಷ ತಂದೆ: ಈಶ್ವರ, ವಾಸ: ಚಕ್ಕುಲಿಕಟ್ಟೆ, ಲಕ್ಷ್ಮೀನಗರ, ಕೊಳಲಗಿರಿ ಅಂಚೆ, ಉಪ್ಪೂರು ಗ್ರಾಮ, ಬ್ರಹ್ಮಾವರ ತಾಲೂಕು ಎಂಬಾತನ ವಿರುದ್ಧ ಪಿ.ಐ.ಟಿ. ಎನ್.ಡಿ.ಪಿ.ಎಸ್. ಕಾಯ್ದೆಯಡಿ ಬಂಧನ ಕ್ರಮ ಜರುಗಿಸಲು, ಪೊಲೀಸ್‌ ನಿರೀಕ್ಷಕರು, ಸೆನ್‌ ಅಪರಾಧ ಠಾಣೆಯ ಮುಖಾಂತರ ಬಂದ ವರದಿಯನ್ನು ಪೊಲೀಸ್‌ ಅಧೀಕ್ಷಕರು, ಉಡುಪಿ ಜಿಲ್ಲೆರವರು, ಬಂಧನ ಆದೇಶಕ್ಕಾಗಿ ಮಾನ್ಯ ಪೊಲೀಸ್‌ ಮಹಾನಿರೀಕ್ಷಕರು, ಪಶ್ಚಿಮ ವಲಯ, ಮಂಗಳೂರುರವರಿಗೆ ಸಲ್ಲಿಸಿದ್ದು, ಮಾನ್ಯರು ಆತನ ವಿರುದ್ಧ ದಾಖಲಾದ ಪ್ರಕರಣಗಳನ್ನು ಪರಿಶೀಲಿಸಿ, ದಿನಾಂಕ 19/05/2025ರಂದು ಬಂಧನ ಆದೇಶ ಹೊರಡಿಸಿದ್ದು, ಪೊಲೀಸ್‌ ಉಪನಿರೀಕ್ಷಕರು, ಬ್ರಹ್ಮಾವರ ಠಾಣೆರವರು ದಿನಾಂಕ 20/05/2025ರಂದು ಆರೋಪಿಗೆ ಬಂಧನ ಆದೇಶ ಜಾರಿಗೊಳಿಸಿ, ಬಂಧಿತನನ್ನು ಕೇಂದ್ರ ಕಾರಾಗೃಹ, ಧಾರವಾಡದಲ್ಲಿ ಬಿಟ್ಟಿರುತ್ತಾರೆ. ದಿನಾಂಕ 01/07/2025ರಂದು ಬೆಂಗಳೂರಿನ ಹೈಕೋರ್ಟ್‌ ಪೀಠದಲ್ಲಿ ಸದ್ರಿ ಕಾಯ್ದೆಯನ್ವಯ ಹೊರಡಿಸಲಾದ ಬಂಧನ ಆದೇಶದ ಬಗ್ಗೆ ವಿಚಾರಣೆ ನಡೆದು, ಮಾನ್ಯ ಹೈಕೋರ್ಟ್‌ ಪೀಠವು ಪೊಲೀಸ್‌ ಮಹಾನಿರೀಕ್ಷಕರು, ಪಶ್ಚಿಮ ವಲಯ, ಮಂಗಳೂರುರವರ ಆದೇಶವನ್ನು ಎತ್ತಿ ಹಿಡಿದು ಬಂಧಿತ ಆಸಾಮಿಗೆ ದಿನಾಂಕ 20/05/2025ರಿಂದ 01 ವರ್ಷದ ವರೆಗೆ ಬಂಧನ ಆದೇಶವನ್ನು ಸ್ಥಿರೀಕರಿಸಿದೆ. ಬಂಧಿತ ಆಸಾಮಿಯ ವಿರುದ್ಧ ಒಟ್ಟು 04 ಪ್ರಕರಣ ದಾಖಲಾಗಿದ್ದು, ಅವುಗಳಲ್ಲಿ 02 ಪ್ರಕರಣಗಳಲ್ಲಿ ಸಜೆಯಾಗಿದ್ದು, ಇನ್ನುಳಿದ 02 ಪ್ರಕರಣಗಳು ಮಾನ್ಯ ನ್ಯಾಯಾಲಯದ ವಿಚಾರಣೆಯಲ್ಲಿದೆ.