Home Karavali Karnataka ಕೊಡವೂರು ಶಂಕರನಾರಾಯಣ ದೇವಸ್ಥಾನ : ನೂತನ ಸಮುದಾಯ ಭವನದ ಶಿಲಾನ್ಯಾಸ…!!

ಕೊಡವೂರು ಶಂಕರನಾರಾಯಣ ದೇವಸ್ಥಾನ : ನೂತನ ಸಮುದಾಯ ಭವನದ ಶಿಲಾನ್ಯಾಸ…!!

ಮಲ್ಪೆ : ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವತಿಯಿಂದ ನಿರ್ಮಾಣಗೊಳ್ಳಲಿರುವ ಸಮುದಾಯ ಭವನದಲ್ಲಿ ಸತ್ಕಾರ್ಯಗಳು ನಿರಂತರ ನಡೆಯುತ್ತಿರಲಿ, ಇಲ್ಲಿ ನಡೆಯುವ ಎಲ್ಲ ಕಾರ್ಯಗಳಿಗೂ, ಸೇವೆ ನೀಡುವವರಿಗೂ ಶ್ರೀ ದೇವರ ಅನುಗ್ರಹ ಪ್ರಾಪ್ತಿಯಾಗಲಿ ಎಂದು ಭಾವೀ ಪರ್ಯಾಯ ಶೀರೂರು ಮಠದ ಶ್ರೀ ವೇದವರ್ಧನತೀರ್ಥ ಶ್ರೀಪಾದರು ನುಡಿದರು.

ಅವರು ಸೋಮವಾರ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವತಿಯಿಂದ ನಿರ್ಮಾಣಗೊಳ್ಳಲಿರುವ ನೂತನ ಸಮುದಾಯ ಭವನದ ಶಿಲಾನ್ಯಾಸವನ್ನು ನೆರವೇರಿಸಿ ಆಶೀರ್ವಚನ ನೀಡಿದರು.​ ಉದ್ಯಮಿ ಶ್ರೀಧರ್ ​ರಾವ್ ಕಲ್ಮಾಡಿ ಪುಣೆ ಅವರು ನೂತನ ಸಮುದಾಯ ಭವನಕ್ಕೆ ಭೂಮಿಪೂಜೆ ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಕಾಂಚನ ಹುಂಡೈನ ಆಡಳಿತ ನಿರ್ದೇಶಕ ಪ್ರಸಾದ್ ರಾಜ್ ಕಾಂಚನ್ ಮಾತನಾಡಿ, ದೇವಸ್ಥಾನಗಳು ಅಭಿವೃದ್ದಿಯಾದಾಗ ಆ ಊರು ಅಭಿವೃದ್ದಿಗೊಳ್ಳಲು ಸಾಧ್ಯ. ಈ ನೂತನ ಯೋಜನೆಗೆ ಸರಕಾರದ ಮಟ್ಟದಲ್ಲಿ ಗರಿಷ್ಟ ಅನುದಾನವನ್ನು ಒದಗಿಸಿಕೊಡುವ ಪ್ರಯತ್ನ ಮಾಡಲಾಗುವುದು ಎಂದರು.​ ಅಧ್ಯಕ್ಷತೆಯನ್ನು ಕೊಡವೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ವಹಿಸಿದ್ದರು.

​ಧಾರ್ಮಿಕ ಚಿಂತಕ ಶ್ರೀಶ ಭಟ್ ಕಡೆಕಾರ್, ದೇವಸ್ಥಾನದ ಪ್ರಧಾನ ತಂತ್ರಿ ಪುತ್ತೂರು ವಾದಿರಾಜ ತಂತ್ರಿ, ಮಲ್ಪೆ ಉದ್ಯಮಿ ಆನಂದ ಪಿ. ಸುವರ್ಣ, ಭಕ್ತವೃಂದದ ಅಧ್ಯಕ್ಷ ದಿವಾಕರ್ ಶೆಟ್ಟಿ ತೋಟದಮನೆ, ಕೋಶಾಧಿಕಾರಿ ರಾಮ ಶೇರಿಗಾರ, ನಗರಸಭಾ ಸದಸ್ಯರಾದ ವಿಜಯ ಕೊಡವೂರು, ಶ್ರೀಶ ಭಟ್ ಕೊಡವೂರು, ಸುಂದರ್ ಜೆ. ಕಲ್ಮಾಡಿ, ಯೋಗೀಶ್ ಸಾಲ್ಯಾನ್, ​ಕರ್ಕೇರಾ ಇಂಜಿನಿಯರಿಂಗ್ ನ ಪ್ರಕಾಶ್ ಕರ್ಕೇರ, ಧಾರ್ಮಿಕ ಪರಿಷತ್ತಿನ ಸದಸ್ಯರಾದ ಪದ್ಮನಾಭ ಬಂಗೇರ ಕಲ್ಮಾಡಿ, ಆಶಾ ಚಂದ್ರಶೇಖರ್, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಸೀತಾರಾಮ ಆಚಾರ್ಯ, ಭಾಸ್ಕರ್ ಪಾಲನ್, ರಾಜ ಸೇರಿಗಾರ, ವಾದಿರಾಜ್ ಸಾಲ್ಯಾನ್, ಯಶೋಧರ್ ಸಾಲ್ಯಾನ್, ಕೆ. ಬಾಬ, ಉಷಾ ಆನಂದ್, ಶೀಲ ಕೆ. ದೇವಾಡಿಗ, ಸೇವಾ ಸಮಿತಿಯ ಕೋಶಾಧಿಕಾರಿ ಬಾಲಕೃಷ್ಣ ಕೊಡವೂರು ಮೊದಲಾದವರು ಉಪಸ್ಥಿತರಿದ್ದರು.

ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಜನಾರ್ದನ್ ಕೊಡವೂರು ಸ್ವಾಗತಿಸಿದರು.ಕಾರ್ಯದರ್ಶಿ ಸತೀಶ್ ಕೊಡವೂರು ವಂದಿಸಿದರು. ಕಾವ್ಯ ಸೀತಾರಾಮ ಆಚಾರ್ಯ ಪ್ರಾರ್ಥಿಸಿದರು. ಪೂರ್ಣಿಮಾ ಜನಾರ್ದನ್ ನಿರೂಪಿಸಿದರು.