Home Karavali Karnataka ಜ್ಞಾನಗಂಗಾ ಪಿಯು ಕಾಲೇಜು ಮೂಡುಬೆಳ್ಳೆ ಇಲ್ಲಿ 2025-26 ನೇ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ...

ಜ್ಞಾನಗಂಗಾ ಪಿಯು ಕಾಲೇಜು ಮೂಡುಬೆಳ್ಳೆ ಇಲ್ಲಿ 2025-26 ನೇ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮ..!!

ಜ್ಞಾನಗಂಗಾ ಪಿಯು ಕಾಲೇಜು ಮೂಡುಬೆಳ್ಳೆ ಇಲ್ಲಿ 2025-26 ನೇ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದಶ್ರೀ ಭಗವನ್ ದಾಸ್ ನಿರ್ದೇಶಕರು, ಏಸ್ ಟೆಕ್ನೋಕ್ರಾಟ್ಸ್ ಪ್ರೈವೇಟ್ (ಲಿ.), ಉಡುಪಿ. ಇವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ ವಿದ್ಯಾರ್ಥಿಗಳು ಪಾಠದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಹಾಗೂ ಪುಸ್ತಕವನ್ನು ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು.
ಶಿಕ್ಷಕರಾದವರು ತಿದ್ದಿ- ಬುದ್ದಿ ಹೇಳಿ ವಿದ್ಯಾರ್ಥಿಗಳನ್ನು ಶಿಲ್ಪಗಳಂತೆ ಕೆತ್ತುತ್ತಾರೆ ಹೀಗೆ ಕೆತ್ತಿದ ಶಿಲ್ಪಗಳು ಮುಂದೊಂದು ದಿನ ಒಂದು ಸುಂದರ ಶಿಲ್ಪ ಕಲೆಯಾಗಿ ರೂಪುಗೊಳ್ಳುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಶ್ರೀ ಎಮ್ ಗೋಪಿಕೃಷ್ಣರಾವ್ ಸ್ಥಾಪಕ ಅಧ್ಯಕ್ಷರು ಜ್ಞಾನಗಂಗಾ ಪದವಿಪೂರ್ವ ಕಾಲೇಜು ಹಾಗೂ ವಕೀಲರು ಇವರು ಮಾತನಾಡಿ, ನಾಯಕನಾದವನು ತಮ್ಮ ಜೀವನದಲ್ಲಿ ಶಿಸ್ತು,ದೈರ್ಯ,ಆತ್ಮವಿಶ್ವಾಸ, ಸಂಯಮ ಮುಂತಾದವುಗಳನ್ನು ಅಳವಡಿಸಿಕೊಳ್ಳಬೇಕು ಹಾಗೂ ನಾಯಕನಾದವನು ಎಲ್ಲರನ್ನು ಮುಂದುವರೆಸಿಕೊಂಡು ಹೋಗುವಂತಹ ವ್ಯಕ್ತಿ ಆಗಿರಬೇಕು ಎಂದು ಹೇಳಿದರು.ಕಾಲೇಜಿನ ಪ್ರಾಂಶುಪಾಲೆ ಡಾ.ಲೀನಾ ನಾಯ್ಕ ವಿದ್ಯಾರ್ಥಿ ಸಂಘದ ಪಧಾದಿಕಾರಿಗಳಿಗೆ ಪ್ರಮಾಣವಚನ ವಾಚಿಸಿದರು.ವಿದ್ಯಾರ್ಥಿ ನಾಯಕಿ ಶ್ರಾವ್ಯ ಎಸ್ ಶೆಟ್ಟಿ ಹಾಗೂ ವಿದ್ಯಾರ್ಥಿ ನಾಯಕ ಆದಿತ್ಯ ಎಸ್ ಸಾಲಿಯನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ವಿದ್ಯಾರ್ಥಿ ನಾಯಕಿ ಶ್ರಾವ್ಯ ಸ್ವಾಗತಿಸಿದರು‌.ವಿದ್ಯಾರ್ಥಿ ನಾಯಕ ಆದಿತ್ಯ ಎಸ್ . ಧನ್ಯವಾದ ಸಲ್ಲಿಸಿದರು. ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ವಿದ್ಯಾರ್ಥಿನಿ ಕುಮಾರಿ ಜೊಸ್ಲಿನ್ ಕಾರ್ಯಕ್ರಮ ನಿರೂಪಿಸಿದರು.