Home Crime ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೇ 21 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ…!!

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೇ 21 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ…!!

ಕುಂದಾಪುರ : ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 21 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಕಾಸರಗೋಡು ನಿವಾಸಿ ಫಾರೂಕ್‌ ಎಂದು ಗುರುತಿಸಲಾಗಿದೆ.

ಪ್ರಕರಣ ವಿವರ : ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ 21 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ವಾರೆಂಟು ಆಸಾಮಿಯನ್ನು ಪತ್ತೆ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಗ್ಗೆ

ದಿನಾಂಕ:25.12.2004 ರಂದು ಪಿರ್ಯಾದಿದಾರರಾದ ಶೌಕತ್‌ ಅಲಿ ಎಂಬವರು ನೀಡಿದ ದೂರಿನ ಹಿನ್ನಲೆ ಶಂಕರನಾರಾಯಣ ಠಾಣಾ ಪ್ರಕರಣ ಸಂಖ್ಯೆ 159/2004 ಕಲಂ,395 ಐಪಿಸಿಯಂತೆ (ಅಮಾಸೆಬೈಲು ಠಾಣಾ ಎಲ್‌ಪಿಸಿ:01/2018)ಪ್ರಕರಣ ದಾಖಲಾಗಿರುತ್ತದೆ. ಸದರಿ ಪ್ರಕರಣದಲ್ಲಿ ಒಬ್ಬ ಆರೋಪಿ ಫಾರೂಕ್‌, ತಂದೆ: ಮಹಮ್ಮದ್‌ ಬಲ್ಲೂರು, ವಾಸ: ಮೆಗ್ರಾಲು, ಪುತ್ತೂರು, ಕಾಸರಗೋಡು ಜಿಲ್ಲೆ ರವರು2004ರಿಂದ ಮಾನ್ಯ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದು ಈತನ ವಿರುದ್ದ ಎಲ್.ಪಿ.ಸಿ ವಾರಂಟು ಹೊರಡಿಸಿರುತ್ತದೆ.

ಎಲ್‌ಪಿಸಿ ವಾರಂಟು ಆಸಾಮಿಯನ್ನು ಪತ್ತೆ ಮಾಡಲು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹರಿರಾಮ್‌ ಶಂಕರ್‌, ಐಪಿಎಸ್ ಹಾಗೂ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ಸುಧಾಕರ್‌ ಎಸ್‌ ನಾಯ್ಕ ರವರ ಮಾರ್ಗದರ್ಶನದಲ್ಲಿ, ಕುಂದಾಪುರ ಉಪವಿಭಾಗದ ಪೊಲೀಸ್‌ ಉಪಾಧೀಕ್ಷಕರಾದ ಹೆಚ್‌.ಡಿ. ಕುಲಕರ್ಣಿ ಹಾಗೂ ಜಯರಾಮ್‌ ಗೌಡ, ಪೊಲೀಸ್ ವೃತ್ತ ನಿರೀಕ್ಷಕರು ಕುಂದಾಪುರ ವೃತ್ತ ರವರ ನಿರ್ದೇಶನದಂತೆ ಅಮಾಸೆಬೈಲು ಪೊಲೀಸ್‌ ಉಪನಿರೀಕ್ಷಕರಾದ ಅಶೋಕ್‌ ಕುಮಾರ್ ಹಾಗೂ ಚಂದ್ರ ಎ.ಕೆ ಪೊಲೀಸ್‌ ಉಪನಿರೀಕ್ಷಕರವರು ಪತ್ತೆ ಕಾರ್ಯಾಚರಣೆಯ ಬಗ್ಗೆ ವಿಶೇಷ ತಂಡವನ್ನು ರಚಿಸಲಾಗಿದ್ದು, ತಂಡವು ಹಲವು ಆಯಾಮಗಳ ಮೂಲಕ ಖಚಿತ ಮಾಹಿತಿಯನ್ನು ಸಂಗ್ರಹಿಸಿ ದಿನಾಂಕ: 28.07.2025ರಂದು ಆರೋಪಿಯನ್ನು ರಾಮನಗರ ಜಿಲ್ಲೆ ಮಾಗಡಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಸದ್ರಿ ಕಾರ್ಯಾಚಣೆಯಲ್ಲಿ ಅಮಾಸೆಬೈಲು ಪೊಲೀಸ್‌ ಪೊಲೀಸ್‌ ಉಪನಿರೀಕ್ಷಕರಾದ ಅಶೋಕ್‌ ಕುಮಾರ್‌ ಹಾಗೂ ಸಿಬ್ಬಂದಿಯವರಾದ ರಾಘವೇಂದ್ರ ಹೆಚ್‌ಸಿ, ಪರಮೇಶಪ್ಪ ಹೆಬಸೂರು ಪಿಸಿ, ಸುಧಾಕರ್‌ ಪಿಸಿ, ದರ್ಶನ್‌ ಪಿಸಿ, ಮಲ್ಲೇಶ್‌ ಪಿಸಿ ಹಾಗೂ ಜಿಲ್ಲಾ ಪೊಲೀಸ್‌ ಕಛೇರಿಯ ದಿನೇಶ್‌ ರವರು ಪಾಲ್ಗೊಂಡಿದ್ದರು.

ದಿನಾಂಕ: 29.07.2025 ರಂದು ವಾರಂಟ್‌ ಅಸಾಮಿ ಫಾರೂಕ್‌, ತಂದೆ: ಮಹಮ್ಮದ್‌ ಬಲ್ಲೂರು, ವಾಸ:ಮೆಗ್ರಾಲು, ಪುತ್ತೂರು, ಕಾಸರಗೋಡು ಜಿಲ್ಲೆ. ಹಾಲಿ ವಾಸ: ರೂಂ ನಂ:407, ಫ್ರೆಶ್‌ ಲ್ಯಾಂಡ್‌ ಮಿನಿ ಸ್ಮಾರ್ಟ್‌ ಬಿಲ್ಡಿಂಗ್‌,ಹೊಸಪೇಟೆ ಸರ್ಕಲ್‌ ಮಾಗಡಿ, ಮಾಗಡಿ ತಾಲೂಕು,ರಾಮ ನಗರ ಜಿಲ್ಲೆ ಇತನನ್ನು ವಶಕ್ಕೆ ಪಡೆದು ವಾರೆಂಟ್‌ನೊಂದಿಗೆ ಮಾನ್ಯ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಧೀಶರು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತಾರೆ.