ಸತ್ಯಸಾಯಿ ಗ್ರಾಮ, ಮುದ್ದೇನಹಳ್ಳಿ: ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವದ ಸ್ಮರಣಾರ್ಥವಾಗಿ 100 ದಿನಗಳ ವಿಶ್ವ ಸಾಂಸ್ಕೃತಿಕ ಉತ್ಸವ ನಡೆಯುತ್ತಿದೆ. ಇದರ ಭಾಗವಾಗಿ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ದಾರ್ಶನಿಕ ಮಾನವತಾವಾದಿ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ನೇತೃತ್ವದಲ್ಲಿ ‘ವಿಶ್ವ ಸಾಂಸ್ಕೃತಿಕ ವಸ್ತು ಪ್ರದರ್ಶನ’ಕ್ಕೆ ಭಾರತ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಭಾನುವಾರ (ಅಕ್ಟೋಬರ್ 26) ಚಾಲನೆ ನೀಡಿದ್ದಾರೆ.
ಕೇಂದ್ರ ಸಂಸ್ಕೃತಿ ಸಚಿವಾಲಯ ಮತ್ತು ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ (ಐಜಿಎನ್ ಸಿಎ) ಸಹಕಾರದೊಂದಿಗೆ ನಡೆಯುತ್ತಿರುವ ಈ ವಸ್ತು ಪ್ರದರ್ಶನದಲ್ಲಿ ಜನಾಂಗ, ಲಿಂಗ, ಭಾಷೆ, ಧರ್ಮ, ಕಲೆ ಸೇರಿದಂತೆ ಮಾನವೀಯತೆಯನ್ನು ಒಂದುಗೂಡಿಸುವ ಸಾಂಸ್ಕೃತಿಕ ಜಗತ್ತನ್ನು ಪ್ರಸ್ತುತಪಡಿಸುತ್ತಿದೆ. ಅಷ್ಟು ಮಾತ್ರವಲ್ಲದೆ, ‘ವಸುಧೈವ ಕುಟುಂಬಕಂ’ ಎಂಬ ಸನಾತನ ಧರ್ಮ ತತ್ತ್ವದಲ್ಲಿ ಬೇರೂರಿರುವ ವಸ್ತು ಪ್ರದರ್ಶನದಲ್ಲಿ ಭೌಗೋಳಿಕ ಅಡೆತಡೆಗಳ ಹೊರತಾಗಿಯೂ ಮಾನವಕುಲವು ಆಳವಾಗಿ ಪರಸ್ಪರ ಬೆಸೆದುಕೊಂಡಿದೆ ಎಂಬ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ.
ಸಾಂಪ್ರದಾಯಿಕ ಪ್ರದರ್ಶನಕ್ಕಿಂತ ಹೆಚ್ಚಾಗಿ ಒಂದು ದರ್ಶನ ನಿರೂಪಣೆಯಾಗಿ ವಿನ್ಯಾಸಗೊಳಿಸಲಾದ ಈ ಪ್ರದರ್ಶನದಲ್ಲಿ ಮಾನವಕುಲದ ಮೂಲಗಳು, ಧಾತುರೂಪದ ಸಾಮರಸ್ಯ, ದೈವಿಕ ಮಾತೃತ್ವ, ಪವಿತ್ರ ಚಿಹ್ನೆಗಳು, ತೀರ್ಥಯಾತ್ರೆಯ ತಾಣಗಳನ್ನು ಕಣ್ತುಂಬಿಕೊಳ್ಳಬಹುದು.
ಒಂದು ಜಗತ್ತು ಒಂದು ಕುಟುಂಬ ಮಿಷನ್ ಮತ್ತು ಐಜಿಎನ್ ಸಿಎ ಸಂಗ್ರಹಿಸಿರುವ ಪ್ರಾದೇಶಿಕ ಸಂಸ್ಕೃತಿಯ ಗ್ಯಾಲರಿಯನ್ನು ಒಳಗೊಂಡ ಜಾಗತಿಕ ವಿಷಯಗಳನ್ನು ಪ್ರತಿನಿಧಿಸುವ ಹತ್ತು ಗ್ಯಾಲರಿಗಳನ್ನು ಇಲ್ಲಿ ಕಾಣಬಹುದು. ಕಲಾಕೃತಿಗಳು, ಆರ್ಕೈವಲ್ ದೃಶ್ಯಗಳು ಮತ್ತು ಸಾಕ್ಷ್ಯಚಿತ್ರಗಳ ಮೂಲಕ ದಕ್ಷಿಣ ಭಾರತದ ಕಲಾತ್ಮಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸುತ್ತದೆ.
ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಇಂತಹ ವಸ್ತು ಪ್ರದರ್ಶನಗಳು ಪರಿಣಾಮಕಾರಿ ನೆನಪುಗಳಾಗುತ್ತವೆ. ಹಲವು ಭಿನ್ನತೆಗಳ ಅಡಿಯಲ್ಲಿ, ಎಲ್ಲಾ ನಾಗರಿಕತೆಗಳು ಸೇರಲು, ಸ್ಪಷ್ಟ ಅರ್ಥವನ್ನು ಹುಡುಕಲು ಮತ್ತು ಸಾಮರಸ್ಯದಿಂದ ಬದುಕಲು ಮಾನವ ಹಂಬಲ ಹೊರಹೊಮ್ಮುತ್ತದೆ. ಶಾಂತಿಯುತ ಸಹಬಾಳ್ವೆಗೆ ಸಾಂಸ್ಕೃತಿಕ ಸಾಕ್ಷರತೆ ಅತ್ಯಗತ್ಯ ಎಂದು ಪ್ರತಿಪಾದಿಸಿದ್ದರು.
ಸದ್ಗುರು ಶ್ರೀ ಮಧುಸೂದನ ಸಾಯಿ ಮಾತನಾಡಿ, ಸಂಸ್ಕೃತಿ ಎಂದರೆ ನಾವು ಕಲಾಕೃತಿಗಳು ಮತ್ತು ಸೌಂದರ್ಯಶಾಸ್ತ್ರದಲ್ಲಿ ಆನುವಂಶಿಕವಾಗಿ ಪಡೆಯುವುದಲ್ಲ. ಬದಲಾಗಿ ನಾವು ಪ್ರತಿದಿನ ಕರುಣೆ, ಕರ್ತವ್ಯ ಮತ್ತು ಹಂಚಿಕೆಯ ಜವಾಬ್ದಾರಿಯ ಮೂಲಕ ಬದುಕುವುದು. ನಿಜವಾದ ಪರಂಪರೆ ಎಂದರೆ ಒಂದೇ ಮಾನವ ಕುಟುಂಬದ ಸದಸ್ಯರಾಗಿ ಪರಸ್ಪರ ಕಾಳಜಿ ವಹಿಸುವ ಧೈರ್ಯ ಎಂದು ಹೇಳಿದರು.
ಕಥಾ-ಆಧಾರಿತ ಕೊಠಡಿಗಳು, ಸಂವಾದಾತ್ಮಕ ಪ್ರದರ್ಶನಗಳು, ಐಜಿಎನ್ ಸಿಎ ಪ್ರಾದೇಶಿಕ ಗ್ಯಾಲರಿಗಳು, ಆರ್ಕೈವಲ್ ವಿಷಯ ಮತ್ತು ಸಾಕ್ಷ್ಯಚಿತ್ರ ಪ್ರದರ್ಶನಗಳು ಇಲ್ಲಿವೆ. ಮಕ್ಕಳು, ಯುವಕರು, ವಿದ್ವಾಂಸರು ಇದರ ಅನುಭವವನ್ನು ಪಡೆದುಕೊಳ್ಳಬಹುದು.
‘ವಿಶ್ವ ಸಾಂಸ್ಕೃತಿಕ ವಸ್ತು ಪ್ರದರ್ಶನ’ದ ಉದ್ಘಾಟನೆ ವೇಳೆ ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ ಆಡಳಿತ ವಿಭಾಗದ ಡೀನ್ ಪ್ರೊಫೇಸರ್ ರಮೇಶ್ ಚಂದ್ರ ಗೌರ್ ಉಪಸ್ಥಿತರಿದ್ದರು. ನವೆಂಬರ್ 23 ರವರೆಗೆ ಸಾರ್ವಜನಿಕರಿಗಾಗಿ ತೆರೆದಿರುತ್ತದೆ.
ಒಂದು ಜಗತ್ತು ಒಂದು ಕುಟುಂಬ ಮಿಷನ್ ಕುರಿತು..
ಶಿಕ್ಷಣ, ಆರೋಗ್ಯ ಹಾಗೂ ಪೌಷ್ಟಿಕ ಆಹಾರ ಸೇವೆಗಳ ಮೂಲಕ ಕೆಲಸ ಮಾಡುತ್ತಿರುವ ಈ ಮಿಷನ್, ಕಳೆದ 12 ವರ್ಷಗಳಲ್ಲಿ ವಿಶ್ವದಾದ್ಯಂತ 1.3 ಕೋಟಿಗೂ ಹೆಚ್ಚು ಜನರ ಜೀವನವನ್ನು ಪರಿವರ್ತಿಸಿದೆ. ಯಾರನ್ನೂ ಹಿಂದೆ ಉಳಿಯಲು ಬಿಡುವುದಿಲ್ಲ ಎಂಬ ಆದರ್ಶದೊಂದಿಗೆ ಪ್ರೇರಿತವಾಗಿ ಉಚಿತ ಸೇವಾ ಕಾರ್ಯಗಳ ಮೂಲಕ ಭಾರತದಲ್ಲಿ ಪ್ರತಿದಿನ ಲಕ್ಷಾಂತರ ಜನರ ಮೇಲೆ ಪ್ರಭಾವ ಬೀರುತ್ತಿದೆ.
- ‘ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ’ದ ವಸ್ತು ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಸದ್ಗುರು ಶ್ರೀ ಮಧುಸೂದನ ಸಾಯಿ ಗೌರವಿಸಿದರು.
- ‘ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ’ದ ವಸ್ತು ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮದಲ್ಲಿ ‘ಒಂದು ಜಗತ್ತು ಒಂದು ಕುಟುಂಬ ಮಿಷನ್’ ಸಂಸ್ಥಾಪಕರಾದ ಸದ್ಗುರು ಶ್ರೀ ಮಧುಸೂದನ ಸಾಯಿ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉಪಸ್ಥಿತರಿದ್ದರು.
- ಮುದ್ದೇಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿನ ‘ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ’ದ ‘ವಸ್ತು ಪ್ರದರ್ಶನ’ವನ್ನು ಉದ್ಘಾಟಿಸುತ್ತಿರುವ ಇಂದಿರಾ ಗಾಂಧಿ ನ್ಯಾಷನಲ್ ಕಲಾ ಕೇಂದ್ರದ ಆಡಳಿತ ವಿಭಾಗದ ಡೀನ್ ಡಾ ರಮೇಶ್ ಚಂದ್ರ ಗೌರ್. ‘ಒಂದು ಜಗತ್ತು ಒಂದು ಕುಟುಂಬ ಮಿಷನ್’ ಸಂಸ್ಥಾಪಕರಾದ ಸದ್ಗುರು ಶ್ರೀ ಮಧುಸೂದನ ಸಾಯಿ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉಪಸ್ಥಿತರಿದ್ದರು.
- ಮುದ್ದೇಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿನ ‘ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ’ದ ವಸ್ತು ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮದಲ್ಲಿ ‘ಒಂದು ಜಗತ್ತು ಒಂದು ಕುಟುಂಬ ಮಿಷನ್’ ಸಂಸ್ಥಾಪಕರಾದ ಸದ್ಗುರು ಶ್ರೀ ಮಧುಸೂದನ ಸಾಯಿ.
5) ಮುದ್ದೇಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ‘ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ’ದ ವಸ್ತು ಪ್ರದರ್ಶನವನ್ನು ವೀಕ್ಷಿಸುತ್ತಿರುವ ಸದ್ಗುರು ಶ್ರೀ ಮಧುಸೂದನ ಸಾಯಿ ಮತ್ತು ಇತರೆ ಗಣ್ಯರು.
6) ಜಗತ್ತಿನ ಏಕತೆಯ ಪ್ರದರ್ಶನ: ಸದ್ಗುರು ಶ್ರೀ ಮಧುಸೂದನ ಸಾಯಿ ಮತ್ತು ಗಣ್ಯರು ಮುದ್ದೇಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿನ ‘ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ’ದ ವಸ್ತು ಪ್ರದರ್ಶನವನ್ನು ವೀಕ್ಷಿಸಿದರು.





