ಮೂಡುಬೆಳ್ಳೆ : ಜ್ಞಾನಗಂಗಾ ಪದವಿ ಪೂರ್ವ ಕಾಲೇಜು ನೆಲ್ಲಿಕಟ್ಟೆ ಮೂಡುಬೆಳ್ಳೆ ಇಲ್ಲಿ ನಶಾ ಮುಕ್ತ ಭಾರತ ಅಭಿಯಾನ ಎಂಬ ಘೋಷ ವಾಕ್ಯದೊಂದಿಗೆ ನಡೆದ ರಾಷ್ಟ್ರೀಯ ಸೇವಾ ಯೋಜನೆಯ 9ನೇ ವರ್ಷದ ವಾರ್ಷಿಕ ವಿಶೇಷ ಶಿಬಿರ 2025 ಇದರ ಉದ್ಘಾಟನೆಯು ದಿನಾಂಕ 20.09.2025 ರಂದು ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆ ಅಲೆವೂರು ಇಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಶ್ರೀ ಗುರ್ಮೇ ಸುರೇಶ್ ಶೆಟ್ಟಿ ಶಾಸಕರು ವಿಧಾನಸಭಾ ಕ್ಷೇತ್ರ ಕಾಪು ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸುಂದರವಾಗಿ ಮಾತನಾಡಿದ್ದಾರೆ.
ಜೀವನಕ್ಕಾಗಿ ಸಂಪಾದನೆ ಮಾಡದೆ, ನೆಮ್ಮದಿಗಾಗಿ ಬದುಕಿ ಬಾಳಿ ಸುಖ ಶಾಂತಿ ಸಮೃದ್ಧಿಯಿಂದ ಪ್ರೀತಿಯಿಂದ ಒಂದೊಳ್ಳೆ ಕುಟುಂಬದಲ್ಲಿ ಕೂಡಿ ಬಾಳುವಂತಹ ಮನೋಭಾವವನ್ನು ಹೊಂದುವ ಮನಸ್ಥಿತಿಯನ್ನು ಬೆಳೆಸಿಕೊಳ್ಳುವ ವಿದ್ಯಾರ್ಥಿಗಳು ಮುಂದಿನ ಪೀಳಿಗೆಗೆ ಅಗತ್ಯ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ದಿನೇಶ್ ಕಿಣಿ ಸಂಚಾಲಕರು ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆ ಅಲೆವೂರು ಹಾಗೂ ಲಯನ್ಸ್ ಕ್ಲಬ್ ಅಧ್ಯಕ್ಷರು ಉಡುಪಿ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಅವರ ಎನ್ಎಸ್ಎಸ್ ಶಿಬಿರದ ಅನುಭವವನ್ನು ಹಂಚಿಕೊಳ್ಳುವುದರೊಂದಿಗೆ ವಿದ್ಯಾರ್ಥಿಗಳು ಶಾಲೆಯ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಬಳಸಿಕೊಳ್ಳಲು ಹೇಳಿದರು.
ಕಾರ್ಯಕ್ರಮದ ಇನ್ನೋರ್ವ ಅತಿಥಿಯಾದ ಶ್ರೀ ಯಾದವ ದೇವಾಡಿಗ ಅಧ್ಯಕ್ಷರು ಕ್ರೆಡಿಟ್ ಕಾರ್ಪೊರೇಟಿವ್ ಸೊಸೈಟಿ ಉಡುಪಿ ಹಾಗೂ ಜ್ಞಾನಗಂಗಾ ಪದವಿ ಪೂರ್ವ ಕಾಲೇಜು ಮೂಡುಬೆಳ್ಳೆ ಇವರು ತಮ್ಮ ರಾಷ್ಟ್ರೀಯ ಸೇವಾ ಯೋಜನಾ ಶಿಬಿರದ ಅನುಭವವನ್ನು ಹಂಚಿಕೊಳ್ಳುವುದರ ಮೂಲಕ ಸಹಭಾಗಿತ್ವ ಸಹಬಾಳ್ವೆ ಹೇಗೆ ನಮ್ಮ ಜೀವನದಲ್ಲಿ ಮುಖ್ಯ ಎಂದು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿಯಾದ ನಮ್ಮ ಕಾಲೇಜಿನ ಹೆಮ್ಮೆಯ ಹಳೆ ವಿದ್ಯಾರ್ಥಿ ಶ್ರೀ ವಿಶ್ವಾಸ್ ಕಾಮತ್ ಉದ್ಯಮಿ ನೆಲ್ಲಿಕಟ್ಟೆ ಮೂಡುಬೆಳ್ಳೆ ಇವನು ಕೂಡ ತನ್ನ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದ ಅನುಭವವನ್ನು ಮೇಲಕು ಹಾಕಿ ವಿದ್ಯಾರ್ಥಿಗಳೆಲ್ಲರನ್ನು ಹರಸಿ ಹಾರೈಸಿದರು.
ಮತ್ತೋರ್ವ ಮುಖ್ಯ ಅತಿಥಿಯಾದ ಶ್ರೀ ಪ್ರಭಾಕರ ಕೆ.ಎಸ್ ಪ್ರಭಾರ ಕಾರ್ಯದರ್ಶಿ ಜನರಲ್ ಇನ್ಸುರೆನ್ಸ್ ಕ್ರೆಡಿಟ್ ಕಾರ್ಪೊರೇಟಿವ್ ಸೊಸೈಟಿ ಉಡುಪಿ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ವಿದ್ಯಾರ್ಥಿಗಳೆಲ್ಲರೂ ಉತ್ತಮವಾಗಿ ಪರಿಶ್ರಮದಿಂದ ಕೆಲಸ ಮಾಡಿ ಒಳ್ಳೆಯ ಹೆಸರನ್ನು ಪಡೆಯುವ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಹೇಳಿದರು.
ಕ್ಲೇ ಮಾಡಲಿಂಗ್ ಕಲಾಕಾರರಾಗಿದ್ದು ನಿವೃತ್ತ ಅಧ್ಯಾಪಕರು ನೆಹರು ಪ್ರೌಢಶಾಲೆ ಅಲೆವೂರು ಇವರನ್ನು ಅವರ ಸಾಧನೆಯನ್ನು ಗುರುತಿಸಿ ಸನ್ಮಾನಗೊಳಿಸಲಾಯಿತು.ಇವರು ಉತ್ತಮ ಶಿಕ್ಷಕರೆಂದು ಪ್ರಶಸ್ತಿ ಪಡೆದದಲ್ಲದೆ, ಪರಿಣತ ಪ್ರತಿಭಾನ್ವಿತ ಸ್ಕೌಟ್ಸ್ ಗೈಡ್ ಶಿಕ್ಷಕರು ಆಗಿದ್ದರು.ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ವಿದ್ಯಾರ್ಥಿಗಳು ಭಾವನಾತ್ಮಕವಾಗಿ ಯಾವಾಗಲೂ ಜೀವಿಸಬೇಕು. ನಾಶ ಪದಾರ್ಥಗಳಿಂದ ದೂರವಿದ್ದು ಉತ್ತಮ ಜೀವನ ನಡೆಸಬೇಕು ಎಂದು ಹೇಳಿದರು.
ನಮ್ಮ ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀನಾ ಎಸ್ ನಾಯಕ್ ಇವರು ಸರ್ವರನ್ನೂ ಸ್ವಾಗತಿಸಿದರು.
ಕಾರ್ಯಕ್ರಮದ ಹಾಗೂ ಶಿಬಿರದ ಯೋಜನಾಧಿಕಾರಿಗಳಾದ ಶ್ರೀ ಭಾಸ್ಕರ್ ಆಚಾರ್ಯ ಇವರು ಕಾರ್ಯಕ್ರಮದ ಪ್ರಸ್ತಾವನೆ ನುಡಿ ನುಡಿದರು. ಹಾಗೂ ಸರ್ವರಿಗೂ ಧನ್ಯವಾದ ಸಲ್ಲಿಸಿದರು.
ಎನ್ ಎಸ್ ಎಸ್ ನಾಯಕಿ ಅಧಿತಿ ಹಾಗೂ ನಾಯಕ ಪ್ರಣವ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರು ರಾಷ್ಟ್ರೀಯ ಸೇವಾ ಯೋಜನೆ ಗೀತೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು.
ಅರ್ಥಶಾಸ್ತ್ರ ಉಪನ್ಯಾಸಕಿಯಾದ ಶ್ರೀಮತಿ ಪ್ರತಿಮಾ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.







