ಸುಳ್ಯ : ಶಾಸಕಿ ಭಾಗೀರಥಿ ಮುರುಳ್ಯ ಅವರು ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆಗೆ ಅಗೌರವ ತೋರಿದ್ದಾರೆ ಎಂದು ಆರೋಪ ಕೇಳಿಬಂದಿದೆ.
ರಾಷ್ಟ್ರಗೀತೆ ಬಳಿಕ ಸುಳ್ಯ ತಹಶೀಲ್ದಾರ್ ಮಂಜುಳ ಅವರು ಧ್ವಜಾರೋಹಣ ಮಾಡಿದ್ದಾರೆ.
ರಾಷ್ಟ್ರಧ್ವಜ ಏರಿಸುವ ಮುನ್ನವೇ ರಾಷ್ಟ್ರಗೀತೆಗೆ ಕಮಾಂಡ್ ನೀಡಿದ ಪೊಲೀಸ್ ಅಧಿಕಾರಿ, ಕಮಾಂಡ್ ನೀಡಿದ ತಕ್ಷಣ ರಾಷ್ಟ್ರಗೀತೆಯನ್ನು ಶಾಲಾಮಕ್ಕಳು ಹಾಡಿದ್ದಾರೆ.
ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಎ ನೀರಬಿದರೆ , ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್, ಇಒ ರಾಜಣ್ಣ , ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್, ಚಂದ್ರಶೇಖರ ಪೇರಾಲು ,ನ.ಪಂ.ಸದಸ್ಯ ಎಂ. ವೆಂಕಪ್ಪ ಗೌಡ , ನ.ಪಂ. ಪಂಚಾಯತ್ ಮುಖ್ಯಾಧಿಕಾರಿ ಬಸವರಾಜ್ ಹೆಚ್ ಆರದ , ಗೋಕುಲ್ ದಾಸ್ ಕೆ , ಕ್ಷೇತ್ರ ಶಿಕ್ಷಣಾಧಿಕಾರಿ ಶೀತಲ್ ಯು ಕೆ , ಹರಪ್ರಸಾದ್ ತುದಿಯಡ್ಕ ಸೇರಿದಂತೆ ತಾಲೂಕಿನ ಶಿಕ್ಷಕರು ಮತ್ತು ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದ ತಾಲೂಕಿನ ಕಾರ್ಯಕ್ರಮ ನಡೆದಿದೆ ಎಂದು ಮಾಹಿತಿ ತಿಳಿದು ಬಂದಿದೆ.






