Home Art & Culture ಫೈರ್ ಬ್ರ್ಯಾಂಡ್‌ ಚೈತ್ರಾ ಮನೆಗೆ ಮಂಜು ಭೇಟಿ : ನವಜೋಡಿಗೆ ವಿಶೇಷ ಉಡುಗೊರೆ ಕೊಟ್ಟ ನಟ…!!

ಫೈರ್ ಬ್ರ್ಯಾಂಡ್‌ ಚೈತ್ರಾ ಮನೆಗೆ ಮಂಜು ಭೇಟಿ : ನವಜೋಡಿಗೆ ವಿಶೇಷ ಉಡುಗೊರೆ ಕೊಟ್ಟ ನಟ…!!

ಕುಂದಾಪುರ : ಬಿಗ್ ಬಾಸ್ ಕನ್ನಡ 11’ರ ಸ್ಪರ್ಧಿ ಚೈತ್ರಾ ಕುಂದಾಪುರ ಮೇ 9ರಂದು ಹಸೆಮಣೆ ಏರಿದ್ದಾರೆ. ಈ ಹಿನ್ನೆಲೆ ನವಜೋಡಿಗೆ ಶುಭಹಾರೈಸಲು ಚೈತ್ರಾ ಮನೆಗೆ ಉಗ್ರಂ ಮಂಜು ಭೇಟಿ ನೀಡಿ ವಿಶೇಷ ಉಡುಗೊರೆ ನೀಡಿದ್ದಾರೆ.

ಮೇ 9ರಂದು ನಡೆದ ಚೈತ್ರಾ ಮದುವೆಗೆ ಕಾರಣಾಂತರಗಳಿಂದ ಮಂಜು ಬರಲಾಗಿರಲಿಲ್ಲ. ಮೇ 10 ರಂದು ಚೈತ್ರಾ ನಿವಾಸಕ್ಕೆ ಮಂಜು ಭೇಟಿ ನೀಡಿ ನವಜೋಡಿಗೆ ಶುಭಹಾರೈಸಿದ್ದಾರೆ. ಅದಷ್ಟೇ ಅಲ್ಲ, ಈ ಜೋಡಿಗೆ ವಿಶೇಷವಾದ ಗೋವಿನ ಮೂರ್ತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ದೊಡ್ಮನೆಯಲ್ಲಿ ಸದಾ ಮಂಜು ಮತ್ತು ಚೈತ್ರಾ ಕಿತ್ತಾಡುತ್ತಿದ್ದರು. ಈಗ ಮುನಿಸೆಲ್ಲಾ ಮರೆತು ಚೈತ್ರಾ ನಿವಾಸಕ್ಕೆ ಮಂಜು ತೆರಳಿರೋದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. ಬಿಗ್ ಬಾಸ್ ಶೋ ಮುಗಿದ್ಮೇಲೆಯೂ ಕೋಪವನ್ನು ಮುಂದುವರೆಸದೇ ಸ್ನೇಹದಿಂದ ಇರೋದನ್ನು ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.