ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಮಣ್ ಗ್ರಾಮದಲ್ಲಿ ಆನ್ಲೈನ್ ಬೆಟ್ಟಿಂಗ್ ಆಡುತ್ತಿದ್ದ 45 ವರ್ಷದ ನಜೀರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ವೆಬ್‌ಸೈಟ್ ಲಿಂಕ್ ಮತ್ತು ಆ್ಯಪ್ ಬಳಸಿ ಆನ್ಲೈನ್ ಬೆಟ್ಟಿಂಗ್ ಆಡುತ್ತಿದ್ದು, ಇತರರಿಗೂ ಆಡಲು ಪ್ರಚೋದನೆ ನೀಡುತ್ತಿದ್ದ ಎನ್ನಲಾಗಿದೆ. ಆತನ ಬಳಿ ಇದ್ದ 30,000 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.