ಉಡುಪಿ, : ಕಾಂತರ ಸಿನಿಮಾ ಚಿತ್ರೀಕರಣ ಪೂರ್ಣಗೊಂಡರು ಅವಘಡಗಳು ಮತ್ತೆ ಮತ್ತೆ ಮುಂದುವರೆಯುತ್ತಲೇ ಇದೆ.
ಕಾಂತರ ಸಿನೆಮಾದ ಹೆಸರಾಂತ ಕಲಾವಿದ ಕಲಾವಿದರೊರ್ವರು ಕುಸಿದು ಮೃತಪಟ್ಟ ಘಟನೆ ಇಂದು ಹಿರಿಯಡ್ಕದಲ್ಲಿ ಸಂಭವಿಸಿದೆ.
ಮೃತ ದುರ್ದೈವಿಯನ್ನು ಕಾಂತಾರ ಮೊದಲ ಚಿತ್ರದಲ್ಲಿ ನ್ಯಾಯವಾದಿ ಪಾತ್ರದಲ್ಲಿ ಕಾಣಿಸಿಕೊಂಡ ಪೆರ್ಡೂರು ಮೂಲದ, ಬ್ಯಾಂಕ್ ಆಫ್ ಬರೋಡದ ನಿವೃತ್ತ ಅಧಿಕಾರಿ ಟಿ. ಪ್ರಭಾಕರ್ ಕಲ್ಯಾಣಿ ಎಂದು ಗುರುತಿಸಲಾಗಿದೆ.
ಮೃತರು ಪತ್ನಿ, ಓರ್ವ ಪುತ್ರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತ ಅಂತ್ಯಕ್ರಿಯೆ ಇಂದು ಬೀಡಿನ ಗುಡ್ಡೆಯ ರುದ್ರಭೂಮಿಯಲ್ಲಿ ನಡೆಯಲಿದೆ.
ಇವರು ಕಳೆದ ಎರಡು ದಿನಗಳ ಹಿಂದೆ ಮನೆಯಲ್ಲಿ ಜಾರಿಬಿದ್ದಿದ್ದರು. ಚಿಕಿತ್ಸೆ ಪಡೆದ ಇವರು ಇಂದು ಬೆಳಿಗ್ಗೆ 8:30 ಸುಮಾರಿಗೆ ಮನೆಯಲ್ಲಿ ಕೈಕಾಲು ನೋವು ಎಂದು ಪತ್ನಿ ಜೊತೆ ಹೇಳಿಕೊಂಡಿದ್ದರು. ಇನ್ನೇನು ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಬೇಕೆನ್ನುವಷ್ಟರಲ್ಲಿ ಅವರ ಪ್ರಾಣ ಪಕ್ಷಿ ಹಾರಿ ಹೋಗಿದೆ.
ರಂಗ ಕಲಾವಿದರಾಗಿ, ವಿವಿಧ ನಾಟಕಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಪ್ರಭಾಕರ್ ಅವರು ಕಾಂತಾರ ಸಿನಿಮಾಕ್ಕೆ ಸುಮಾರು ಒಂದು ವರ್ಷಗಳಿಂದ ಗಡ್ಡವನ್ನು ತೆಗೆಯದೆ ಉಳಿಸಿಕೊಂಡಿದ್ದರು. ಆದರೆ ಚಿತ್ರತಂಡವು ಅವರಿಗೆ ಈ ಮೊದಲು ನಿರ್ಧರಿಸಿದ ಪಾತ್ರವನ್ನು ನೀಡದೆ ಬೇರೊಂದು ಪಾತ್ರ ನೀಡಿದ್ದರಿಂದ ಬಹಳ ನೊಂದುಕೊಂಡಿದ್ದರು ಎಂದು ಅವರ ಆಪ್ತ ವಲಯದ ಮಾಹಿತಿ ಲಭಿಸಿದೆ.
