ಬೈಂದೂರು : ಮರವಂತೆ – ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ 2024-25ನೇ ಸಾಲಿನ ವಾರ್ಷಿಕ ಸದಸ್ಯರ ಸಾಮಾನ್ಯ ಸಭೆ
ನಾವುಂದ ಮಹಾಗಣಪತಿ ಮಾoಗಲ್ಯ ಸಭಾ ಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಜಗದೀಶ ಪಿ ಪೂಜಾರಿ ಹಕ್ಕಾಡಿ ಅವರು ಮಾತನಾಡಿ ಸದಸ್ಯರ ಸಾಮಾನ್ಯ ಸಭೆ ಸಂಭ್ರಮದಲ್ಲಿ ನಡೆಯಲು ಸಹಕರಿಸಿದ ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸಿ, ಈ ವರ್ಷ 13% ಡಿವಿಡೆಂಟ್ ಘೋಷಣೆ ಮಾಡಿದರು
ಸಿ. ಎ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ಕೀರ್ತನ್ ಎನ್ ಶೆಟ್ಟಿ, ಪ್ರಗತಿ ಪರ ಕೃಷಿಕ ಅಶೋಕ್ ಶೆಟ್ಟಿ ಮುಳ್ಳುಗುಡ್ಡೆ, ಸಂಘದ ಕಚೇರಿಯ ನಿವೃತ್ತ ನೌಕರ ಸೋಮಯ್ಯ ಬಿಲ್ಲವ ಮರವಂತೆ ಅವರನ್ನು ಗುರುತಿಸಿ, ಸನ್ಮಾನಿಸಿದರು. ಸಂಘದ ವತಿಯಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಸತೀಶ್ ಕುಮಾರ್ ಶೆಟ್ಟಿ, ನಿರ್ದೇಶಕರಾದ ನರಸಿಂಹ ದೇವಾಡಿಗ, ಶ್ರೀನಿವಾಸ ಪೂಜಾರಿ, ಗಣೇಶ್ ಪೂಜಾರಿ, ಪ್ರಭಾಕರ ಎಂ. ಖಾರ್ವಿ, ಲಕ್ಷ್ಮೀ, ಶಕುಂತಲಾ, ಗಣೇಶ್ ಪೂಜಾರಿ, ವೀರೇಂದ್ರ ಹೆಗ್ಡೆ, ರಾಮ ಕಂತಿಹೊಂಡ, ಸುರೇಶ್ ನಾಯ್ಕ, ನಾಮ ನಿರ್ದೇಶಕ ಎಂ ಅಣ್ಣಪ್ಪ ಬಿಲ್ಲವ, ಸಂಘದ ಸಿಬ್ಬಂದಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ನಿರ್ದೇಶಕ ಹರೀಶ್ಚಂದ್ರ ಆಚಾರ್ಯ ಸ್ವಾಗತಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುರೇಶ್ ಅಳ್ವೆಗದ್ದೆ ವರದಿ ಮಂಡಿಸಿದರು. ಶಿಕ್ಷಕ ಎಂ ಶಶಿಧರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
