Home Crime ಅಕ್ರಮ ತಲವಾರ್, ಬಂದೂಕು ಪತ್ತೆ ಪ್ರಕರಣ : ತಿಮರೋಡಿ ಬಂಧಿಸಲು ಬೆಳ್ಳಂಬೆಳಗ್ಗೆ ಮನೆ ಮುಂದೆ ಪೊಲೀಸ್...

ಅಕ್ರಮ ತಲವಾರ್, ಬಂದೂಕು ಪತ್ತೆ ಪ್ರಕರಣ : ತಿಮರೋಡಿ ಬಂಧಿಸಲು ಬೆಳ್ಳಂಬೆಳಗ್ಗೆ ಮನೆ ಮುಂದೆ ಪೊಲೀಸ್ ಎಂಟ್ರಿ…!!

ಬೆಳ್ತಂಗಡಿ: ಎಸ್.ಐ.ಟಿ ಶೋಧದ ವೇಳೆ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಅಕ್ರವಾಗಿ ದಾಸ್ತಾನು ಇರಿಸಿದ್ದ 2 ತಲವಾ‌ರ್ ಮತ್ತು 1 ಬಂದೂಕು ಪತ್ತೆಯಾದ ಬಗ್ಗೆ ಎಸ್.ಐ.ಟಿ ಅಧಿಕಾರಿ ಸೆ.16 ರಂದು ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಈ ಸಂಬಂಧ ಬೆಳ್ತಂಗಡಿ ಪೊಲೀಸರು ಸೆ.19 ರಂದು ಬೆಳಗ್ಗೆ 6 ಗಂಟೆಗೆ ಉಜಿರೆ ತಿಮರೋಡಿ ನಿವಾಸಕ್ಕೆ ಬಂಧಿಸಲು ತೆರಳಿದಾಗ ಮನೆಯಿಂದ ಮೊದಲೇ ಮಹೇಶ್ ಶೆಟ್ಟಿ ತಿಮರೋಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಬುರುಡೆ ಪ್ರಕರಣದ ವಿಚಾರವಾಗಿ ಬೆಳ್ತಂಗಡಿ ಎಸ್‌ಐಟಿ ಪೊಲೀಸರು ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಆ.26ರಂದು ಶೋಧ ನಡೆಸಿದ್ದರು. ಈ ವೇಳೆ ಅಲ್ಲಿ ಎರಡು ತಲವಾರು, ಒಂದು ಬಂದೂಕು ಸಿಕ್ಕಿತ್ತು. ಅದನ್ನು ಸ್ವಾಧೀನ ಪಡಿಸಿಕೊಳ್ಳಲಾಗಿತ್ತು.