Home Crime ಮೂಡುಬಿದಿರೆ: ಡಿವೈಡರ್‌ ಗೆ ಕಾರು ಢಿಕ್ಕಿ : ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು…!!

ಮೂಡುಬಿದಿರೆ: ಡಿವೈಡರ್‌ ಗೆ ಕಾರು ಢಿಕ್ಕಿ : ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು…!!

ಮಂಗಳೂರು : ರಾಷ್ಟ್ರೀಯ ಹೆದ್ದಾರಿ 169 ರ ಮೂಡಬಿದ್ರೆಯ ಬೆಳುವಾಯಿ ಪೇಟೆಯಲ್ಲಿ ಆ. 16 ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟ ಘಟನೆ ವರದಿಯಾಗಿದೆ.

ಮೃತ ಯುವಕ ಸಂದೀಪ್‌ ಸಿದ್ದಕಟ್ಟೆ (25) ಎಂದು ತಿಳಿದು ಬಂದಿದೆ.

ಕಾರು ಡಿವೈಡರ್‌ ಗೆ ಬಡಿದು ಸಂಭವಿಸಿದ್ದ ಅಪಘಾತದಲ್ಲಿ ಮಂಗಳೂರಿನ ಹೊಟೇಲೊಂದರ ಕಾರ್ಮಿಕ ವೇಣೂರು ನಿವಾಸಿ ಸುಮಿತ್‌ ಮೃತಪಟ್ಟಿದ್ದರು. ಜೊತೆಗಿದ್ದ ಸಂದೀಪ್‌ ಸಹಿತ ನಾಲ್ವರು ಗಾಯಗೊಂಡಿದ್ದರು. ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಂದೀಪ್‌ ಮದ್ಯಾಹ್ನದ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.