Home Crime ಭಟ್ಕಳ : ಅರಣ್ಯದಲ್ಲಿ ದನಗಳ ಅಸ್ಥಿಪಂಜರ ಪತ್ತೆ ಪ್ರಕರಣ : ಇಬ್ಬರು ಆರೋಪಿಗಳು ಅರೆಸ್ಟ್ ..!!

ಭಟ್ಕಳ : ಅರಣ್ಯದಲ್ಲಿ ದನಗಳ ಅಸ್ಥಿಪಂಜರ ಪತ್ತೆ ಪ್ರಕರಣ : ಇಬ್ಬರು ಆರೋಪಿಗಳು ಅರೆಸ್ಟ್ ..!!

ಉತ್ತರಕನ್ನಡ : ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಅರಣ್ಯದಲ್ಲಿ ದನಗಳ ರಾಶಿ ಅಸ್ಥಿಪಂಜರ ಸಿಕ್ಕಿದ್ದ ಪ್ರಕರಣವನ್ನು ಬಯಲಿಗೆಳೆಯುವಲ್ಲಿ ಪೊಲೀಸರು ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ.

ಭಟ್ಕಳದ ಮಗ್ದೂಂ ಕಾಲೂನಿ ಬಳಿಯ ಬೆಳ್ನೆ ಗ್ರಾಮದ ಸರ್ವೆ ನಂಬರ್ 74 ರ ಭಾಗದಲ್ಲಿ ಸಿಕ್ಕ ರಾಶಿ ರಾಶಿ ಮೂಳೆಗಳು ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿತ್ತು. ಹಿಂದೂಪರ ಹೋರಾಟಗಾರರು ಸ್ಥಳಕ್ಕೆ ತೆರಳಿ ವಿಡಿಯೋ ಚಿತ್ರೀಕರಿಸಿ ಘಟನೆಯನ್ನು ಖಂಡಿಸಿದ್ದರು. ಆದರೆ, ಈ ವಿಡಿಯೋಗಳು ಸುಳ್ಳು. ಕೋಮು ಸಂಘರ್ಷ ನಡೆಸಲು ತಂತ್ರಜ್ಞಾನ ಬಳಸಿ ವಿಡಿಯೋ ಚಿತ್ರೀಕರಣ ಮಾಡಲಾಗಿದೆ ಎಂದು ಮಗ್ದೂಂ ಕಾಲೋನಿಯ ತಾಹೀರ್ ಮಸ್ತಾನ್ ಎಂಬಾತ ಕೆಲವರ ಮೇಲೆ ದೂರು ನೀಡಿದ್ದರು.

ಸ್ಥಳಕ್ಕೆ ತೆರಳಿದ್ದ ಪೊಲೀಸರು, ಪುರಸಭೆ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಗೋವುಗಳ ಮೂಳೆ ಇರುವುದನ್ನು ಪತ್ತೆ ಮಾಡಿದ್ದರು. ಬೆಳ್ನೆ ಭಾಗದ ಅರಣ್ಯಾಧಿಕಾರಿ ಭಟ್ಕಳ ಶಹರ ಠಾಣೆಯಲ್ಲಿ ದೂರು ನೀಡಿದ್ದು, ಇದರ ಬೆನ್ನಲ್ಲೇ ಈ ಪ್ರಕರಣ ಸಂಬಂಧ ಎರಡು ತಂಡಗಳನ್ನು ಮಾಡಿ ತನಿಖೆ ಕೈಗೊಳ್ಳಲಾಗಿತ್ತು. ಇದೀಗ ಭಟ್ಕಳದ ಮೊಹ್ಮದ್ ಸಮಾನ್, ಮಹಮ್ಮದ್ ರಾಹೀನ್ ಎಂಬ ಇಬ್ಬರನ್ನು ಬಂಧಿಸಲಾಗಿದೆ.

ಸದ್ಯ ಭಟ್ಕಳದ ಅರಣ್ಯದಲ್ಲಿ ಸಿಕ್ಕ ಗೋವುಗಳ ಅಸ್ತಿ ಪಂಚರದ ಬೆನ್ನುಬಿದ್ದ ಭಟ್ಕಳ ಶಹರ ಠಾಣೆಯ ಸಿಪಿಐ ದಿವಾಕರ್ ನೇತೃತ್ವದ ಪಿ.ಎಸ್.ಐ ನವೀನ್ ರವರ ತಂಡ ಇಬ್ಬರನ್ನು ಬಂಧಿಸಿ ಉಳಿದ ಗೋಕಳ್ಳರ ಬಂಧನಕ್ಕೆ ಬಲೆ ಬೀಸಿದೆ.

ನಿರಂತರವಾಗಿ ಜಿಲ್ಲೆಯಲ್ಲಿ ಗೋ ಕಳ್ಳತನ ಹತ್ಯೆ ನಡೆಯುತ್ತಿದೆ. ಈ ಒಂದು ವರ್ಷದಲ್ಲಿ 41 ಪ್ರಕರಣ ದಾಖಲಿಸಲಾಗಿದ್ದು , 98 ಜನ ಅಪರಾಧಿಗಳನ್ನು ಜೈಲಿಗೆ ಕಳುಹಿಸಲಾಗಿದೆ. ಇದಲ್ಲದೇ 191 ಹಸುಗಳನ್ನ ರಕ್ಷಣೆ ಮಾಡಿ 2425 ಕೆಜಿ ಗೋ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ.