ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪ ಬೈಕಾಡಿ ಗ್ರಾಮದ ದೂಪದಕಟ್ಟೆ ಎಂಬಲ್ಲಿ ಅಕ್ರಮವಾಗಿ ಇಸ್ಪೀಟು ಆಟ ಆಡುತ್ತಿದ್ದಾರೆ ಎಂದು ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಐದು ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಬಂಧಿತ ಆರೋಪಿಗಳು 1. ಶರೀಫ್ ನಧಾಪ್ (36),2) ರವಿ (30),3) ಯಮನೂರ (45), 4)ಕಾಳಿಂಗಪ್ಪ (26), 5) ಶರಣಪ್ಪ (37) ಎಂದು ತಿಳಿದು ಬಂದಿದೆ. ಅದರಲ್ಲಿ ಒಬ್ಬ ಓಡಿ ಹೋಗಿದ್ದಾನೆ ಎಂದು ತಿಳಿಯಲಾಗಿದೆ.
ಪ್ರಕರಣದ ಸಾರಾಂಶ : ದಿನಾಂಕ 14/09/2025 ರಂದು ಬೈಕಾಡಿ ಗ್ರಾಮದ ದೂಪದಕಟ್ಟೆ ಎಂಬಲ್ಲಿ ಇಸ್ಪೀಟು ಜುಗಾರಿ ಆಟ ನಡೆಯುತ್ತಿರುವ ಬಗ್ಗೆ ಸದಾನಂದ ನಾಯ್ಕ, ಹೆಡ್ ಕಾನ್ಸಟೇಬಲ್,ಬ್ರಹ್ಮಾವರ ಪೊಲೀಸ್ ಠಾಣೆ ಇವರಿಗೆ ಬಂದ ಮಾಹಿತಿಯ ಮೇರೆಗೆ ಮೇಲಾಧಿಕಾರಿಯವರ ಅನುಮತಿ ಪಡೆದು ಠಾಣಾ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಲಾಗಿ ಒಬ್ಬಾತನು ಓಡಿಹೋಗಿದ್ದು ಇಸ್ಪೀಟು ಜುಗಾರಿ ಆಡುತ್ತಿದ್ದ 1. ಶರೀಫ್ ನಧಾಪ್ (36),2) ರವಿ (30),3) ಯಮನೂರ (45), 4)ಕಾಳಿಂಗಪ್ಪ (26), 5) ಶರಣಪ್ಪ (37) ಇವರನ್ನು ಹಿಡಿದು ಅಂದರ್ ಬಾಹರ್ ಇಸ್ಫಿಟ್ ಜುಗಾರಿ ಆಟಕ್ಕೆ ಬಳಸಿದ ನಗದು ರೂಪಾಯಿ 1800/-, ಇಸ್ಪೀಟು ಎಲೆಗಳು , ಮೊಬೈಲ್ ಪೋನ್ ಗಳು -5, KA-20-U-325̧3, KA-20-R-6349̧, KA-20-HE-4707̧, KA-20-EK-0891 ನೇ ನಂಬ್ರದ ದ್ವಿಚಕ್ರ ವಾಹನಗಳನ್ನು ಸ್ವಾಧೀನಕ್ಕೆ ಪಡೆದುಕೊಂಡಿರುವುದಾಗಿದೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 189/2025 ಕಲಂ: 87 KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.