ಬ್ರಹ್ಮಾವರ : ವಾರಂಬಳ್ಳಿ ಗ್ರಾಮದ ನಿವಾಸಿ ಸುರೇಶ್ (55) ಅವರು ಅನಾರೋಗ್ಯದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ಮೃತರ ಅಕ್ಕ ಮಾಲತಿ (56) ಅವರು ನೀಡಿದ ಮಾಹಿತಿಯಂತೆ, ಸುರೇಶ್ ಅವರು ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದು, ಮೇ 18ರಂದು ಅಕ್ಕನ ಮನೆಗೆ ಬಂದಿದ್ದರು. ಮೇ 19ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 12 ಗಂಟೆಯ ನಡುವಿನ ಅವಧಿಯಲ್ಲಿ “ಮಲಗುತ್ತೇನೆ” ಎಂದು ಹೇಳಿ ಮನೆಯ ಕೋಣೆಗೆ ತೆರಳಿದ್ದರು.
ನಂತರ ಅವರು ಕೋಣೆಯ ಬಾಗಿಲನ್ನು ಒಳಗಿನಿಂದ ಚಿಲಕ ಹಾಕಿಕೊಂಡು, ಸೀರೆಯನ್ನು ಫ್ಯಾನ್‌ಗೆ ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಬ್ರಹ್ಮಾವರ ಪೊಲೀಸ್ ಸ್ಟೇಷನ್ನ ಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.




