Home Crime ಮಲ್ಪೆಯಲ್ಲಿ ಅಂದರ್-ಬಾಹರ್ ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ…!!

ಮಲ್ಪೆಯಲ್ಲಿ ಅಂದರ್-ಬಾಹರ್ ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ…!!

ಮಲ್ಪೆ : ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್ ಜುಗಾರಿ ಆಟ ನಡೆಯುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಮಲ್ಪೆ ಪೊಲೀಸರು ದಾಳಿ ನಡೆಸಿ ಐವರನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.

ಮೇ 18 ರಂದು ಮಲ್ಪೆ ಪೊಲೀಸ್ ಸ್ಟೇಷನ್ ನ ಪೊಲೀಸ್ ಉಪನಿರೀಕ್ಷಕರಾದ ಅನೀಲ್ ಕುಮಾರ್‌ ಅವರು ಠಾಣೆಯಲ್ಲಿರುವಾಗ, ಉಡುಪಿ ತಾಲೂಕು ಕೊಡವೂರು ಗ್ರಾಮದ ಮಲ್ಪೆ ಬಂದರಿನಲ್ಲಿರುವ ಸಾಹುಕಾರ್‌ ಬಾರ್‌ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಜುಗಾರಿ ಆಟ ಆಡುತ್ತಿರುವ ಬಗ್ಗೆ ಮಾಹಿತಿ ಪಡೆದಿದ್ದರು.

ತಕ್ಷಣ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು, ಜುಗಾರಿ ಆಟದಲ್ಲಿ ತೊಡಗಿದ್ದ ಈಶ್ಚರ್ ನಾಯ್ಕ್‌, ಪರಶುರಾಮ, ಪ್ರದೀಪ್‌, ಯಂಕೋಬ ಹಾಗೂ ಹನುಮಂತ ಎಂಬ ಐವರನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳಿಂದ ಜುಗಾರಿ ಆಟಕ್ಕೆ ಬಳಸಲಾಗುತ್ತಿದ್ದ ನೀಲಿ ಬಣ್ಣದ ಟಾರ್ಪಲ್‌, ಇಸ್ಪೀಟ್‌ ಎಲೆಗಳು ಹಾಗೂ ರೂ.4,100 ನಗದು ಹಣವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಈ ಕುರಿತು ಮಲ್ಪೆ ಪೊಲೀಸ್ ಸ್ಟೇಷನ್  ನಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.