Home Latest ಶ್ರೀಕೃಷ್ಣ ಮಠದಲ್ಲಿ  ಸೌರ ಯುಗಾದಿಯ ಸಂಭ್ರಮ..!

ಶ್ರೀಕೃಷ್ಣ ಮಠದಲ್ಲಿ  ಸೌರ ಯುಗಾದಿಯ ಸಂಭ್ರಮ..!

ಉಡುಪಿ : ಶ್ರೀಕೃಷ್ಣ ಮಠದಲ್ಲಿ ಇಂದು ಸೌರ ಯುಗಾದಿಯ ಪ್ರಯುಕ್ತ ಸುವರ್ಣ ರಥೋತ್ಸವವು ಪರ್ಯಾಯ ಶ್ರೀ ಶೀರೂರು ಮಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಹಾಗೂ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಪೇಜಾವರ ಮಠಾಧೀಶರಾದ ಶ್ರೀವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ನಡೆಯಿತು

ಬಳಿಕ ಶ್ರೀ ಕೃಷ್ಣದೇವರ ಮುಂಭಾಗ ಚಂದ್ರ ಶಾಲೆಯಲ್ಲಿ “ಪರಾಭವ” ಸಂವತ್ಸರದ ಪಂಚಾಂಗ ಶ್ರವಣವನ್ನು ಪರ್ಯಾಯ ಮಠದ ಪುರೋಹಿತರಾದ ಸುದರ್ಶನ ಆಚಾರ್ಯರು ನಡೆಸಿದರು. ದಿವಾನರಾದ ಡಾII ಉದಯಕುಮಾರ ಸರಳತ್ತಾಯರು ಉಪಸ್ಥಿತರಿದ್ದರು.