ಮಂಗಳೂರು: ಗಂಡನ ಮೇಲಿನ ಕೋಪದಲ್ಲಿ ಟೆಕ್ಸ್ ಟೈಲ್ ಅಂಗಡಿಗೆ ಬುಧವಾರ ಸಂಜೆ ವೇಳೆಗೆ ಬುರ್ಖಾ ಧರಿಸಿ ಬಂದಿದ್ದ ಪತ್ನಿಯೇ ತನ್ನ ಪತಿಗೆ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ಬಿಸಿರೋಡಿನಲ್ಲಿ ಸಂಭವಿಸಿದೆ.
ಕೃಷ್ಣ ಕುಮಾರ್ ಸೋಮಯಾಜಿ ಹಲ್ಲೆಗೀಡಾದವರಾಗಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಪತ್ನಿ ಜ್ಯೋತಿ ಸೋಮಯಾಜಿ ಎಂಬವರು ಕತ್ತಿಯಿಂದ ಕಡಿದು ಹಲ್ಲೆ ಮಾಡಿದ್ದಾರೆ.
ಬಿ.ಸಿ ರೋಡಿನ ಸೋಮಯಾಜಿ ಟೆಕ್ಸ್ ಟೈಲ್ ಅಂಗಡಿಗೆ ಸಂಜೆ ಏಳು ಗಂಟೆ ವೇಳೆಗೆ ಬುರ್ಖಾ ಧರಿಸಿ ಗ್ರಾಹಕನ ಸೋಗಿನಲ್ಲಿ ಬಂದಿದ್ದ ಪತ್ನಿ ಕ್ಯಾಶ್ ಕೌಂಟರ್ ನಲ್ಲಿ ಕುಳಿತ್ತಿದ್ದ ಪತಿಗೆ ಕತ್ತಿಯಲ್ಲಿ ಕಡಿದು ಪರಾರಿಯಾಗಿದ್ದರು. ಕೈಗೆ ಗಂಭೀರ ಗಾಯಗೊಂಡ ಕೃಷ್ಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇತ್ತೀಚೆಗೆ ಗಂಡ – ಹೆಂಡತಿ ಮಧ್ಯೆ ಕೌಟುಂಬಿಕ ಕಲಹ ಉಂಟಾಗಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅದೇ ವಿಷಯದಲ್ಲಿ ಪತ್ನಿ ನೇರವಾಗಿ ಅಂಗಡಿಗೆ ಬಂದು ಕತ್ತಿಯಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.






