Home Dskshina Kannada ಆಟೋ ರಿಕ್ಷಾ- ಆಕ್ಟಿವಾ ನಡುವೆ ಭೀಕರ ಅಪಘಾತ: ಸವಾರ ಗಂಭೀರ

ಆಟೋ ರಿಕ್ಷಾ- ಆಕ್ಟಿವಾ ನಡುವೆ ಭೀಕರ ಅಪಘಾತ: ಸವಾರ ಗಂಭೀರ

ವಿಟ್ಲ: ಆಟೋ ರಿಕ್ಷಾ ಮತ್ತು ಆಕ್ಟಿವಾ ನಡುವೆ ಅಪಘಾತ ಸಂಭವಿಸಿ ಆಕ್ಟಿವಾ ಸವಾರ ಗಂಭೀರ ಗಾಯಗೊಂಡ ಘಟನೆ ವಿಟ್ಲ ಕೆಲಿಂಜ ಸಮೀಪದ ಪೆಲತ್ತಡ್ಕದಲ್ಲಿ ನಡೆದಿದೆ.

 

ಕಲ್ಲಡ್ಕದಿಂದ ವಿಟ್ಲ ಕಡೆಗೆ ಬರುತ್ತಿದ್ದ ಆಟೋ ರಿಕ್ಷಾ ಕೆಲಿಂಜ ಪೆಲತ್ತಡ್ಕ ಬಳಿ ಸಮೀಪಿಸುತ್ತಿದ್ದಂತೆ, ರಸ್ತೆಯಲ್ಲಿ ಹಾವು ಹರಿದಾಡುತ್ತಿರುವಿದನ್ನು ಕಂಡು ಎದುರುಗಡೆ ಇದ್ದ ವಾಹನ ಸವಾರ ಬ್ರೇಕ್ ಹಾಕಿದ್ದು, ಪರಿಣಾಮ ಹಿಂದೆ ಇದ್ದ ಆಟೋ ಚಾಲಕ ತಕ್ಷಣ ಬಲ ಭಾಗಕ್ಕೆ ವಾಹನ ತಿರುಗಿಸಿದ್ದಾರೆ.

 

ಪರಿಣಾಮ ವಿಟ್ಲದಿಂದ ಕಲ್ಲಡ್ಕ ಕಡೆಗೆ ಬರುತ್ತಿದ್ದ ಆಕ್ಟಿವಾಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಆಕ್ಟಿವಾ ಸವಾರ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.