ಉಡುಪಿ:ಕ್ರಿಶ್ಚಿಯನ್ ಧರ್ಮದಲ್ಲಿ ಹುಟ್ಟಿ ಪಾದ್ರಿಯಾಗಲು ತರಬೇತಿ ಪಡೆದವರು ಕಾಮ್ರೇಡ್ ನಿತ್ಯಾನಂದ ಸ್ವಾಮಿ ಅವರು ಅನಂತರ ಅತ್ಯಂತ ಬದ್ಧತೆಯಿಂದ ಸಮಾಜದಲ್ಲಿ ತುಳಿತಕ್ಕೆ ಒಳಗಾದ ಕ್ರಷಿಕೂಲಿಕಾರರನ್ನು ಸಂಘಟಿಸಿ ಅವರಿಗೆ ಮನೆ ನಿವೇಶನ ಅವರ ಕೂಲಿ ಪ್ರಶ್ನೆಗಳಿಗಾಗಿ ನಿರಂತರ ಹೋರಾಟದಲ್ಲಿ ಕೊನೆವರೆಗೂ ಸೆಣಸಿದ ಕ್ರಾಂತಿಕಾರಿ ವ್ಯಕ್ತಿತ್ವ ಎಂದು ಸುರೇಶ್ ಕಲ್ಲಾಗರ ಹೇಳಿದರು
ಅವರು ಪಕ್ಷದ ಸದಸ್ಯರಾಗಿ ಮುಖಂಡರಾಗಿ ಶೋಷಿತರ ಪರವಾದ ಹಲವು ಹೋರಾಟಗಳನ್ನು ಮುನ್ನೆಡೆಸಿದವರು ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದರು.
ಮೂಲತ: ಉಡುಪಿ ಜಿಲ್ಲೆಯ ಸಂತೆ ಕಟ್ಟೆ ನಿವಾಸಿಯಾದ ನಿತ್ಯಾನಂದ ಸ್ವಾಮಿ ಉಡುಪಿ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕ್ರಷಿಕೂಲಿಕಾರರನ್ನು ಸಂಘಟಿಸಿದರು ಹೋತನಹಳ್ಳಿ ಎಂಬಲ್ಲಿ ಭೂಹೀನ ನಲವತ್ತು ಕ್ರಷಿಕೂಲಿಕಾರರಿಗಾಗಿ ಅರಣ್ಯ ಭೂಮಿ ಆಕ್ರಮಣದಲ್ಲಿ ಭಾಗವಹಿಸಿ ಕೂಲಿಕಾರರೊಂದಿಗೆ ಬೆಳಗಾಂ ಹಿಂಡಲಗಾ ಜೈಲಲ್ಲಿ ಒಂದು ತಿಂಗಳ ಕಾಲ ಬಂಧಿಸಲ್ಪಟ್ಟರು.
ಗಂಗಾವತಿ ಮರಕುಂಬಿಯಲ್ಲಿ ದಲಿತರ ಮೇಲಿನ ದೌರ್ಜನ್ಯ ಭೂಮಾಲಕರು ದಲಿತರ ಮನೆಗಳನ್ನು ಸುಟ್ಟು ಹಾಕಿದಾಗ ಅದರ ವಿರುದ್ಧ ಸತತ ಹೋರಾಟದ ಫಲವಾಗಿ ತಪ್ಪಿತಸ್ಥರಿಗೆ ಜೀವವಾಧಿ ಶಿಕ್ಷೆ ಆಗುವುದರಲ್ಲಿ ನಿತ್ಯಾನಂದ ಸ್ವಾಮಿ ಪಾತ್ರ ಮಹತ್ವದ್ದು ಎಂದು ಹೇಳಿದರು.
ಕಾಮ್ರೇಡ್ ನಿತ್ಯಾನಂದ ಸ್ವಾಮಿ ಅವರು ಬಿಟ್ಟು ಹೋದ ಭೂಹೀನರ ಕೂಲಿಕಾರರ ಚಳುವಳಿಗಳನ್ನು ಜಿಲ್ಲೆಯಲ್ಲಿ ಸಂಘಟಿಸುವುದು ಅತ್ಯಂತ ಮಹತ್ವದ ಕೆಲಸವಾಗಬೇಕು ಅದುವೆ ನಾವು ನಿತ್ಯಾನಂದ ಸ್ವಾಮಿ ಅವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ ಎಂದು ಹೇಳಿದರು.
ಅವರು ಉಡುಪಿ ಜಿಲ್ಲಾ ಸಿಪಿಎಂ ಪಕ್ಷದ ಜಿಲ್ಲಾ ಕಚೇರಿಯಲ್ಲಿ ನಡೆದ ಇತ್ತೀಚೆಗೆ ನಿಧನರಾದ ಕಾಮ್ರೇಡ್ ನಿತ್ಯಾನಂದ ಸ್ವಾಮಿ ಶ್ರದ್ಧಾಂಜಲಿ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.
ಶ್ರದ್ಧಾಂಜಲಿ ಸಭೆಯಲ್ಲಿ ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಎಚ್ ನರಸಿಂಹ, ಚಂದ್ರಶೇಖರ ವಿ, ಶಶಿಧರ ಗೊಲ್ಲ ಮಾತನಾಡಿದರು.
ಸಿಪಿಎಂ ಜಿಲ್ಲಾ ಸಮಿತಿ ಸದಸ್ಯರಾದ ಕವಿರಾಜ್ ಎಸ್ ಕಾಂಚನ್ ಮಾತನಾಡಿ ವಂದಿಸಿದರು.ಉಮೇಶ್ ಕುಂದರ್ ಶೀಲಾವತಿ,ಸರೋಜ ಮೊದಲಾದವರು ಇದ್ದರು.



