Home Kundapura News ಕುಂದಾಪುರ: ಹೆಸರಾಂತ ಉದ್ಯಮಿ, ಬಾರ್ ಮಾಲಕ ಹೃದಯಾಘಾತದಿಂದ ನಿಧನ…!!

ಕುಂದಾಪುರ: ಹೆಸರಾಂತ ಉದ್ಯಮಿ, ಬಾರ್ ಮಾಲಕ ಹೃದಯಾಘಾತದಿಂದ ನಿಧನ…!!

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಚಿತ್ತೂರು ಫ್ಯೂಯಲ್ಸ್ ಮತ್ತು ಬಾರ್ ಮಾಲಕ ಇಡೂರು ಕರುಣಾಕರ ಶೆಟ್ಟಿ (49) ಹೃದಯಾಘಾತದಿಂದ ನಿಧನರಾದರು.

ಹಾಲ್ಕಲ್‌ನಲ್ಲಿರುವ ತಮ್ಮ ಒಡೆತನದ ಖುಷಿ ಬಾರ್ & ರೆಸ್ಟೋರೆಂಟ್‌ನಲ್ಲಿ ಎದೆನೋವು ಕಾಣಿಸಿಕೊಂಡಿದ್ದು ತಕ್ಷಣ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಅಷ್ಟೋತ್ತಿಗಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.

ಹೋಟೆಲ್ ಉದ್ಯಮಿಯಾಗಿರುವ ಅವರು ಬಳ್ಳಾರಿಯ ಸ್ಟೇಶನ್ ರಸ್ತೆಯಲ್ಲಿ ರೇಣುಕಾ ವೆಜ್ ಹಾಗೂ ಬಳ್ಳಾರಿಯ ಕೆ.ಎಸ್.ಆರ್.ಟಿ.ಸಿ ಬಸ್‌ಸ್ಟ್ಯಾಂಡ್ ಎದುರು ಹೋಟೆಲ್ ದ್ವಾರಕ ರೆಸಿಡೆನ್ಸಿ ಲಾಡ್ಜಿಂಗ್ & ರೆಸ್ಟೋರೆಂಟನ್ನು ನಡೆಸಿಕೊಂಡಿದ್ದರು. ಇತ್ತೀಚೆಗಿನ ವರ್ಷಗಳಲ್ಲಿ ಊರಲ್ಲಿ ತಮ್ಮ ಉದ್ಯಮವನ್ನು ವಿಸ್ತರಿಸಿ ಚಿತ್ತೂರಿನಲ್ಲಿ ಪೆಟ್ರೋಲ್ ಬಂಕ್ ಹಾಗೂ ಸಕಲ ಕನ್ವೆಷನ್ ಸಭಾಂಗಣ, ಹಾಲ್ಕಲ್‌ನಲ್ಲಿ ಖುಷಿ ಬಾರ್ & ರೆಸ್ಟೋರೆಂಟ್ ಸ್ಥಾಪಿಸಿದ್ದರು. ಇಡೂರು ಮಹಾಲಿಂಗೇಶ್ವರ ದೇವಸ್ಥಾನದ ಧಾರ್ಮಿಕ ಚಟುವಟಿಕೆ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಚಟುವಟಿಕೆಗಳಿಗೆ ಆರ್ಥಿಕ ಸಹಕಾರ ನೀಡುತ್ತಾ ಬಂದಿದ್ದರು. ಹವ್ಯಾಸಿ ಯಕ್ಷಗಾನ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದರು. ಮೃತರು ತಾಯಿ, ಪತ್ನಿ, ಪುತ್ರಿ, ಪುತ್ರ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.