ಕಾರ್ಕಳ : ನಾಲ್ಕುಸ್ಥಾನ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಎಪ್ರಿಲ್ 2ರ ಗುರುವಾರ ನಡೆಯಲಿರುವ ನಂದಳಿಕೆ ಅಯನೋತ್ಸವ ಸಿರಿಜಾತ್ರಾ ಮಹೋತ್ಸವವನ್ನು ಸಂಪನ್ನಗೊಳಿಸಿಕೊಡುವ ಕುರಿತಾಗಿ ರೂಪುರೇಷೆಗಳನ್ನು ನಿರ್ಧರಿಸಲು ಸ್ವಯಂ ಸೇವಕರ ಮತ್ತು ದೇವಳದ ಸಿಬ್ಬಂದಿ ವರ್ಗದವರ ಪೂರ್ವಭಾವಿ ಸಭೆಯನ್ನು ಮಾ.15ರ ಭಾನುವಾರ ಸಂಜೆ 4 ಗಂಟೆಗೆ ದೇವಳದ ಸಭಾಂಗಣದಲ್ಲಿ ಕರೆಯಲಾಗಿದೆ.
ಸಭೆಯಲ್ಲಿ ಸಂಬಂಧಪಟ್ಟ ದೇವಳದ ಎಲ್ಲಾ ಸ್ವಯಂ ಸೇವಕರು, ಸಿಬ್ಬಂದಿ ವರ್ಗ, ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು ತಪ್ಪದೇ ಹಾಜರಿದ್ದು ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕಾಗಿ ನಂದಳಿಕೆ ಚಾವಡಿ ಅರಮನೆ ಸುಹಾಸ್ ಹೆಗ್ಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



