Home Karavali Karnataka ಶ್ರೀ ಕೃಷ್ಣ ಬಾಲನಿಕೇತನಕ್ಕೆ ರೊಬೊಸಾಫ್ಟ್ ಕಂಪನಿಯೊಂದ ಸ್ಟೀಮ್ ಬಾಯ್ಲರ್ ಕೊಡುಗೆ…!!

ಶ್ರೀ ಕೃಷ್ಣ ಬಾಲನಿಕೇತನಕ್ಕೆ ರೊಬೊಸಾಫ್ಟ್ ಕಂಪನಿಯೊಂದ ಸ್ಟೀಮ್ ಬಾಯ್ಲರ್ ಕೊಡುಗೆ…!!

ಉಡುಪಿ : ಉಡುಪಿಯ ಖ್ಯಾತ ಸಾಫ್ಟ್‌ವೇರ್ ಸಂಸ್ಥೆ ರೊಬೊಸಾಫ್ಟ್ ಟೆಕ್ನಾಲಜೀಸ್ ಕಂಪನಿಯು ತನ್ನ ಸಿಎಸ್ ರ್ ನಿಧಿಯಿಂದ ಕುಕ್ಕಿಕಟ್ಟೆಯ ಶ್ರೀ ಕೃಷ್ಣ ಬಾಲನಿಕೇತನಕ್ಕೆ ಅವಶ್ಯವಾಗಿ ಬೇಕಾದಂತ ಸ್ಟೀಮ್ ಬಾಯ್ಲರ್ ನ್ನು ನೀಡಿದರು.

ಅದರ ಹಸ್ತಾಂತರ ಕಾರ್ಯಕ್ರಮಕ್ಕೆ ಆಗಮಿಸಿದ ಪೇಜಾವರ ಮಠದ ಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ದಾನಿಗಳ ನೆರವಿನಿಂದ ನಡೆಯುವ ಈ ಸಂಸ್ಥೆಗೆ ನೀಡಿದ ಈ ಉಪಯುಕ್ತ ಕೊಡುಗೆಗಾಗಿ ರೊಬೊಸಾಫ್ಟ್ ಟೆಕ್ನಾಲಜೀಸ್ ಸಂಸ್ಥೆಯ ಹಣಕಾಸು ವಿಭಾಗದ ಉಪಾಧ್ಯಕ್ಷ ಶ್ರೀ ಕೃಷ್ಣರಾಜ ರಾವ್ ಮತ್ತು ಕಂಪನಿ ಸೆಕ್ರೆಟರಿ ಶ್ರೀ ಚಕ್ರಿ ಹೆಗ್ಡೆಯವರನ್ನು ಅಭಿನಂದಿಸಿ ಹರಸಿದರು.

ಈ ಸಮಾರಂಭದಲ್ಲಿ ಬಾಲನಿಕೇತನ ಆಡಳಿತ ಮಂಡಳಿಯ ಉಪಾಧ್ಯಕ್ಷ ಪ್ರೊ.ಕಮಲಾಕ್ಷ, ಕಾರ್ಯದರ್ಶಿ ರಾಮಚಂದ್ರ ಉಪಾಧ್ಯಾಯ, ರಘುರಾಮ ಆಚಾರ್ಯ, ಸುಬ್ರಹ್ಮಣ್ಯ ಕಾರಂತ, ನಾರಾಯಣ ಬಿ.ಕೆ. ಹೇಮಾ ಸಂಜಯ ರಾವ್, ಮಾತಾಜಿಯವರು ಮತ್ತು ಮಕ್ಕಳು ಉಪಸ್ಥಿತರಿದ್ದರು.