ಮಂಗಳೂರು, ಮೇ 23: ನಗರದಲ್ಲಿ ಮದುವೆ ವಿಚಾರಕ್ಕೆ ನಡೆದ ಗಲಾಟೆ, ವ್ಯಕ್ತಿಯ ಕೊಲೆಯಲ್ಲಿ ಅಂತ್ಯವಾಗಿರುವಂತಹ ಘಟನೆ ಮಂಗಳೂರು ಹೊರವಲಯದ ವಳಚ್ಚಿಲ್ ಬಳಿ ತಡರಾತ್ರಿ ಸಂಭವಿಸಿದೆ.
ಚಾಕುವಿನಿಂದ ಇರಿದು ವಾಮಂಜೂರು ನಿವಾಸಿ ಸುಲೇಮಾನ್(50) ಎಂಬಾತನನ್ನು ಸಂಬಂಧಿ ಮುಸ್ತಾಫ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಅಷ್ಟೇ ಅಲ್ಲದೆ ಸುಲೇಮಾನ್ನ ಇಬ್ಬರ ಪುತ್ರರಾದ ರಿಯಾಬ್, ಸಿಯಾಬ್ ಮೇಲೂ ಹಲ್ಲೆ ನಡೆಸಿ ಪರಾರಿ ಆಗಿದ್ದ ಮುಸ್ತಾಫನನ್ನು ಕೆಲವೇ ಗಂಟೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಸಂಬಂಧಿ ಮುಸ್ತಫ ಎಂಬವರ ಮದುವೆಯನ್ನು ಸುಲೇಮಾನ್ ನೆರವೇರಿಸಿದ್ದ. ಇವರಿಬ್ಬರ ನಡುವೆ ಮದುವೆ ಸಂದರ್ಭದಲ್ಲಿ ವೈಮನಸ್ಸು ಉಂಟಾಗಿತ್ತು. ಇದೇ ವಿಚಾರವಾಗಿ ಮುಸ್ತಫ ಜೊತೆ ಮಾತುಕತೆಗೆ ತನ್ನ ಇಬ್ಬರು ಪುತ್ರರೊಂದಿಗೆ ಸುಲೇಮಾನ್ ಬಂದಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಸುಲೇಮಾನ್ಗೆ ಮುಸ್ತಫ ಚೂರಿಯಿಂದ ಇರಿದಿದ್ದಾನೆ.ಸುಲೇಮಾನ್ ಮೃತಪಟ್ಟದ್ದಾರೆ.
ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
