Home Crime ಬೆಳ್ತಂಗಡಿ: ಜೂಜಾಟ ಅಡ್ಡೆಗೆ ಖಾಕಿ ರೇಡ್ : 17 ಮಂದಿಯ ಬಂಧನ…!!

ಬೆಳ್ತಂಗಡಿ: ಜೂಜಾಟ ಅಡ್ಡೆಗೆ ಖಾಕಿ ರೇಡ್ : 17 ಮಂದಿಯ ಬಂಧನ…!!

ಬೆಳ್ತಂಗಡಿ: ಕರಿಮಣೇಲು ಗ್ರಾಮದ ಬೋಳಾರಗುತ್ತು ಎಂಬಲ್ಲಿ ಜೂಜಾಟ ನಡೆಯುತ್ತಿದ್ದ ಸ್ಥಳಕ್ಕೆ ವೇಣೂರು ಪೊಲೀಸರು ದಾಳಿ ನಡೆಸಿ 17 ಮಂದಿಯನ್ನು ಭಾನುವಾರ ರಾತ್ರಿ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ಪಡಂಗಡಿಯ ಅಶೋಕ್(37), ವಿತೇಶ್(33), ವೇಣೂರು ಕರಿಮಣೇಲಿನ ರಾಜೇಶ್(35), ಕತ್ತೋಡಿಬೈಲಿನ ರಮೇಶ್(40), ಕುಕ್ಕೇಡಿ ಬರ್ನತ್ಯಾರಿನ ರಾಜೇಶ್(42), ಕಾರ್ಕಳ ಮುಗಿರಡ್ಡಸ ಪ್ರಮೀತ್(35), ನಾರಾವಿ ಅರಸಿಕಟ್ಟೆಯ ಕರುಣಾಕರ(38), ವೇಣೂರು ಶಿವಾಜಿನಗರದ ಶೇಖರ್(50), ಮರೋಡಿಯ ಸಧಾಕರ(42), ಗರ್ಡಾಡಿಯ ನವಾಝ್(26), ಗೇರುಕಟ್ಟೆ ಜನತಾಕಾಲೋನಿಯ ಇಕ್ಬಾಲ್(37), ಕುಕ್ಕೇಡಿಯ ಕಿರಣ್ (35), ವೇಣೂರು ಶಿವಾಜಿನಗರದ ಲಕ್ಷಣ(51), ಬೆಳ್ತಂಗಡಿ ಲಾಯಿಲದ ನಿಸಾ‌ರ್(47), ಬೆಳ್ತಂಗಡಿ ತೆಂಕಎಡಪದವು ಜೀವಂಧ‌ರ್ ಕುಮಾರ್(36), ಗುರುವಾಯನಕೆರೆಯ ಸಂತೋಷ್(37), ಸೊಣಂದೂರು ಅಬ್ದುಲ್ ಅಝೀಝ್(40) ಎಂದು ತಿಳಿದು ಬಂದಿದೆ.

ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಜೂಜಾಡುತ್ತಿದ್ದ ಕುರಿತು ವೇಣೂರು ಪೊಲೀಸ್‌ ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌ ಅಕ್ಷಯ್ ಡವಗಿ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಮೇ.17 ರಂದು ರಾತ್ರಿ ದಾಳಿ ನಡೆಸಿದ್ದಾರೆ‌ ಎಂದು ತಿಳಿದು ಬಂದಿದೆ.

ಆರೋಪಿಗಳು ಜೂಜಾಟಕ್ಕೆ ಬಳಸಿದ್ದ 69 ಸಾವಿರ ರೂ. ನಗದು, ಎರಡು ಆಟೋ ರಿಕ್ಷಾ, 20 ಮೊಬೈಲ್ ಫೋನನ್ನು ಪೊಲೀಸರು ವಶಕ್ಕೆ ‌ಪಡೆದುಕೊಂಡಿದ್ದಾರೆ‌ ಎಂದು ತಿಳಿದು ಬಂದಿದೆ.

ಈ ಕುರಿತು ವೇಣೂರು ಪೊಲೀಸ್ ಠಾಣೆಯಲ್ಲಿ 17 ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.