Home Crime ಉಡುಪಿ: ಲಾಕರ್‌ ಕೀ ಕಳ್ಳತನ ಪ್ರಕರಣ – ಪತ್ನಿಯಿಂದಲೇ 23 ಲಕ್ಷ ಮೌಲ್ಯದ ಚಿನ್ನ ಕಳವು..!

ಉಡುಪಿ: ಲಾಕರ್‌ ಕೀ ಕಳ್ಳತನ ಪ್ರಕರಣ – ಪತ್ನಿಯಿಂದಲೇ 23 ಲಕ್ಷ ಮೌಲ್ಯದ ಚಿನ್ನ ಕಳವು..!

ಉಡುಪಿ: ನಗರದಲ್ಲಿ ವಿಚಿತ್ರ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದ್ದು, ಪತ್ನಿಯೇ ಪತಿಯ ಲಾಕರ್‌ ಕೀ ಕಳವು ಮಾಡಿ ಲಕ್ಷಾಂತರ ಮೌಲ್ಯದ ಚಿನ್ನ ದೋಚಿರುವ ಘಟನೆ ನಡೆದಿದೆ.

ಉಚ್ಚಿಲ ಕಾಪು ನಿವಾಸಿ ಕಿರಣ್ ಕುಮಾರ್ (42), ಪಡುಬಿದ್ರಿಯ SEZ ಕಂಪನಿಯಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರು 2016ರಲ್ಲಿ ವನಿತಾ ಎಂಬವರೊಂದಿಗೆ ವಿವಾಹವಾಗಿದ್ದು, ದಾಂಪತ್ಯ ಜೀವನದಲ್ಲಿ ವೈಮನಸ್ಸು ಉಂಟಾಗಿ ಪ್ರಸ್ತುತ ಒಂದೇ ಮನೆಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.

ಫಿರ್ಯಾದುದಾರರು ತಮ್ಮ ದಾಖಲಾತಿಗಳು ಹಾಗೂ IDBI ಬ್ಯಾಂಕ್‌, ಉಡುಪಿ ಶಾಖೆಯ ಲಾಕರ್‌ ಕೀ ಯನ್ನು ಮನೆಯ ಅಲ್ಮಾರಿಯಲ್ಲಿ ಇಟ್ಟಿದ್ದರು. ಏಪ್ರಿಲ್ 10ರಂದು ಕಿರಣ್ ಕುಮಾರ್ ಕೆಲಸಕ್ಕೆ ತೆರಳಿದ್ದ ವೇಳೆ, ಮಧ್ಯಾಹ್ನ ಸುಮಾರು 2 ಗಂಟೆಗೆ ವನಿತಾ ಅವರು ಕೀ ಮೇಕರ್ ಸಹಾಯದಿಂದ ಅಲ್ಮಾರಿಯನ್ನು ಒಡೆದು ಅದರೊಳಗಿದ್ದ ಲಾಕರ್‌ ಕೀ ಯನ್ನು ಕಳವು ಮಾಡಿದ್ದಾರೆ.

ನಂತರ ಆ ಕೀ ಬಳಸಿ IDBI ಬ್ಯಾಂಕ್‌, ಉಡುಪಿ ಶಾಖೆಯ ಲಾಕರ್ ತೆರೆಯಿಸಿ, ಸುಮಾರು 169 ಗ್ರಾಂ ಚಿನ್ನ – ಅಂದಾಜು ಮೌಲ್ಯ 23 ಲಕ್ಷ 67 ಸಾವಿರ ರೂಪಾಯಿಗಳನ್ನು ಕಳವು ಮಾಡಿಕೊಂಡು ಹೋಗಿರುವುದು ಆರೋಪವಾಗಿದೆ.

ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತೆ ವನಿತಾ ವಿರುದ್ಧ ತನಿಖೆ ಮುಂದುವರಿದಿದೆ.