Home Crime ಪಡುಬಿದ್ರಿ : ವ್ಯಕ್ತಿಯೊಬ್ಬರು ನಾಪತ್ತೆ…!!

ಪಡುಬಿದ್ರಿ : ವ್ಯಕ್ತಿಯೊಬ್ಬರು ನಾಪತ್ತೆ…!!

ಪಡುಬಿದ್ರಿ: ಉಡುಪಿ ಜಿಲ್ಲೆಯ ಪಡುಬಿದ್ರಿ ಸಮೀಪ ವ್ಯಕ್ತಿಯೊಬ್ಬರು ನಾಪತ್ತೆಯಾದ ಘಟನೆ ನಡೆದಿದೆ.

ನಾಪತ್ತೆಯಾದ ವ್ಯಕ್ತಿ ಹಾಲನೇ ಗೌಡ ಹಳೇಗೌಡ ಎಂದು ಗುರುತಿಸಲಾಗಿದೆ.

ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ: ಪಿರ್ಯಾದಿದಾರ ಪುಟ್ಟಣ್ಣಗೌಡ ಹೆಚ್ ಹಳೇಗೌಡರ್ (30) ತಂದೆ: ಹಾಲನಗೌಡ ವಾಸ: ತುಮರಿಕೊಪ್ಪ ಹಿರೇಹುಲ್ಲಾಳ ಹಾವೇರಿ ಇವರ ಅಣ್ಣನಾದ, ಗುಡ್ಡೆನೆಗೌಡ ಹಾಲನೇಗೌಡ ಹಳೇಗೌಡ (41) ಇವರು ಸುಮಾರು 10 ವರ್ಷಗಳಿಂದ ಉಡುಪಿಕಡೆಗೆ ಬಂದು ಪಡುಬಿದ್ರಿ ಕಾಪು ಕಡೆಗಳಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು ಎರಡು ಮೂರು ತಿಂಗಳಿಗೆ ಊರುಗೆ ಬರುತ್ತಿದ್ದು, ಸುಮಾರು 6 ತಿಂಗಳ ಹಿಂದೆ ಅಣ್ಣನ ಹೆಂಡಿತಿ ಮಕ್ಕಳೊಂದಿಗೆ ಮನೆ ಬಿಟ್ಟು ತವರು ಮನೆಗೆ ಹೋಗಿದ್ದು ಆ ಬಳಿಕ ಆತ ಮಾನಸಿಕವಾಗಿ ನೋಂದಿದ್ದು ಈಗ 25 ದಿನಗಳ ಹಿಂದೆ ಊರಿಗೆ ಬಂದಿದ್ದು ನಂತರ ಊರಿನಿಂದ ಸುಮಾರು 10 ದಿನಗಳ ಹಿಂದೆ ಉಡುಪಿಯ ಚಿಕ್ಕಮ್ಮ ಗಿರಿಜಾ ಅವರ ಮನೆಯಲ್ಲಿ ನಾಲ್ಕು ದಿನ ಇದ್ದು ದಿನಾಂಕ 28.01.2026 ರಂದು ಪಡುಬಿದ್ರಿಗೆ ಕೆಲಸಕ್ಕೆ ಹೋಗುವುದಾಗಿ ಚಿಕ್ಕಮ್ಮ ಗಿರಿಜಾರಿಗೆ ತಿಳಿಸಿ ಹೋಗಿದ್ದು ದಿನಾಂಕ:30.01.2026 ರಂದು ಬೆಳಿಗ್ಗೆ ಉಚ್ಚಿಲದಿಂದ ಗೋಪಿನಾಥ್ ಎಂಬವರು ಪಿರ್ಯಾದುದಾರರ ಅಣ್ಣ ಮಾಲತೇಶನಿಗೆ ಕರೆಮಾಡಿ ನಿಮ್ಮ ಅಣ್ಣ ಗುಡ್ಡೆನೆಗೌಡ ರವರು ಇಲ್ಲಿ ಹುಚ್ಚುಚ್ಚಾಗಿ ವರ್ತಿಸಿರುವುದಾಗಿ ತಿಳಿಸಿದ್ದು ನಿಮ್ಮ ಅಣ್ಣನನ್ನು ಊರಿಗೆ ಕಳುಹಿಸುಲು 500 ಹಾಕುವಂತೆ ತಿಳಿಸದಂತೆ ಹಣವನ್ನು ಪಿರ್ಯಾದುದಾರರು ಕಳುಹಿಸಿ ಗುಡ್ಡೆನೆಗೌಡ ರವರ ಅವರ ಪೋನ್‌ನಿಂದ ಪಿರ್ಯಾದುದಾರರ ಜೊತೆ ಮಾತನಾಡಿರುತ್ತಾರೆ ಆ ಬಳಿಕ ಗೋಪಿನಾಥ್ ರವರು ಬೆಳಿಗ್ಗೆ 09:50 ಗಂಟೆಗೆ ಪಿರ್ಯಾದುದಾರರ ಅಣ್ಣ ಗುಡ್ಡೆನೆಗೌಡ ರವರನ್ನು ಬಸ್ಸಿನಲ್ಲಿ ಕಳುಹಿಸಿರುವುದಾಗಿ ತಿಳಿಸಿದ್ದು ನಂತರ ಅಣ್ಣನು ಊರಿಗೂ ಬಾರದೇ ಉಡುಪಿ ಚಿಕ್ಕಮ್ಮನ ಮನೆಗೂ ಹೋಗದೇ ಮೋಬೈಲ್ ಸ್ವಿಚ್ ಆಫ್ ಆಗಿರುತ್ತದೆ. ಪಿರ್ಯಾದುದಾರರ ಅಣ್ಣ ಗುಡ್ಡೆನೆಗೌಡ ರವರ ಬಗ್ಗೆ ಪಡುಬಿದ್ರಿ ಸುತ್ತಮುತ್ತಲೂ ಹಾಗೂ ಅಣ್ಣನ ಜೊತೆ ಕೆಲಸಮಾಡುವವರಲ್ಲಿ ಹಾಗೂ ನೆರೆಕರೆಯವರಲ್ಲಿ ವಿಚಾರಿಸಲಾಗಿ ಇಲ್ಲಿಯ ತನಕ ಪತ್ತೆಯಾಗದೇ ಇರುವುದಾಗಿದೆ.

ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 15/2026, ಕಲಂ:ಗಂಡಸು ಕಾಣೆ ರಂತೆ ಪ್ರಕರಣ ದಾಖಲಿಸಲಾಗಿದೆ