ಹೆಬ್ರಿ: ಉಡುಪಿ ಜಿಲ್ಲೆಯ ಹೆಬ್ರಿ ಸಮೀಪ ವ್ಯಕ್ತಿಯೊಬ್ಬರು ಮನೆಯ ಪಕ್ಕದ ಗೇರು ಮರದ ಕೊಂಬೆಗೆ ನೈಲಾನ್ ಹಗ್ಗವನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಸಾವನ್ನಪ್ಪಿದ ವ್ಯಕ್ತಿ ಮುಕುಂದ ನಾಯ್ಕ ಎಂದು ತಿಳಿಯಲಾಗಿದೆ.
ಈ ಘಟನೆ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕಣದ ವಿವರ : ಪಿರ್ಯಾದಿದಾರ ರಾಘವೇಂದ್ರ ನಾಯ್ಕ ಪ್ರಾಯ: 38 ವರ್ಷ ತಂದೆ: ಮುಕುಂದ ನಾಯ್ಕ ವಾಸ: ಶ್ರೀರಾಮ ನಿಲಯ ಮುದ್ರಾಡಿ ಇವರ ತಂದೆ ಮುಕುಂದ ನಾಯ್ಕರವರು ಸುಮಾರು 19-20 ವರ್ಷದಿಂದ ವಿಪರೀತ ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಹೆಬ್ರಿ ಹೆಲ್ತ್ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿ ಮದ್ದು ಮಾಡಲಾಗುತ್ತಿದ್ದು ಅಲ್ಲದೆ ಮೂರು ತಿಂಗಳ ಹಿಂದೆ ವಿಪರೀತ ಸಕ್ಕರೆ ಖಾಯಿಲೆಯಿಂದ ಅವರ ಎಡ ಕಾಲಿನ ಬೆರಳನ್ನು ತೆಗೆಯಲಾಗಿದ್ದು ಮೃತರು ತನಗಿದ್ದ ಖಾಯಿಲೆ ಬಗ್ಗೆ ಮಾನಸಿಕವಾಗಿ ನೊಂದುಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 31/01/2026 ರಂದು ರಾತ್ರಿ 22.00 ಗಂಟೆಯಿಂದ ದಿನಾಂಕ: 01/02/2026 ರಂದು ಬೆಳಿಗ್ಗೆ 06.45 ಗಂಟೆಯ ಮದ್ಯಾವದಿಯಲ್ಲಿ ಮನೆಯ ಪಕ್ಕದ ಗೇರು ಮರದ ಕೊಂಬೆಗೆ ನೈಲಾನ್ ಹಗ್ಗವನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವುದಾಗಿದೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ:02/2026U/s 194 BNSS ರಂತೆ ಪ್ರಕರಣ ದಾಖಲಿಸಲಾಗಿದೆ.





