ಅಜೆಕಾರು: ಉಡುಪಿ ಜಿಲ್ಲೆಯ ಅಜೆಕಾರು ಸಮೀಪದ ಯುವಕನೋರ್ವ ಕೀಟ ನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕ ಸುಜೇಕ ರಾಮ್ ಎಂದು ತಿಳಿದು ಬಂದಿದೆ.
ಈ ಘಟನೆ ಸಂಬಂಧಿಸಿದಂತೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ವಿವರ : ಪಿರ್ಯಾಧಿದಾರ ಮನುರಾಮ್ (30) ಬರ್ವಾಡಿ ತಾಣ, ಬರದ್ವಾಯಿ ಲೆತಿಹಾರ್ರ್, ಜಾರ್ಖಂಡ್ ಇವರ ತಮ್ಮ ಸುಜೇಕ ರಾಮ್ (19) ಎಂಬುವರು ಕಳೆದ ಕೆಲವು ಸಮಯ ಕಾರ್ಕಳ ತಾಲೂಕು ಕಡ್ತಲ ಗ್ರಾಮದ ಚೆನ್ನಿ ಬೆಟ್ಟು ಎಂಬಲ್ಲಿನ ಕುರಿಯಕೋಸ್ ಎಂಬುವರ ತೋಟದಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡಿಕೊಂಡಿದ್ದು ಈತನು ದಿನಾಂಕ 15/08/2025 ರಂದು ಮಧ್ಯಾಹ್ನ ಸುಮಾರು 02:00 ಗಂಟೆಗೆ ಚೆನ್ನಿಬೆಟ್ಟುವಿನ ರೂಮ್ ನಲ್ಲಿ ಯಾವುದೋ ಕೀಟ ನಾಶಕ ಸೇವಿಸಿ ಅಸ್ವಸ್ಥಗೊಂಡವನನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ, ನಂತ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ಕರೆದೋಯ್ದು ಬಳಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎಜೆ ಆಸ್ಪತ್ರೆಗೆ ಕರೆದೊಯ್ದು ಒಳರೋಗಿಯಾಗಿ ಚಿಕಿತ್ಸೆಗೆ ದಾಖಲಿಸಿದ್ದು ಈತನು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 07/09/2025 ರಂದು 14:00 ಗಂಟೆಗೆ ಮೃತ ಪಟ್ಟಿರುತ್ತಾರೆ. ಈ ತನು ದಿನಾಂಕ 15/08/2025 ರಂದು ಮೊಬೈಲ್ ಮೂಲಕ ಬಂದ ಸಂದೇಶಕ್ಕೆ ಸ್ಪಂದನೆ ಮಾಡಿ 7,000/- ಹಣ ಕಳೆದುಕೊಂಡಿದ್ದು ಇದೇ ಕಾರಣಕ್ಕೆ ನೊಂದು ವಿಷ ಸೇವಿಸಿ ಆತ್ಮಹತೆ ಮಾಡಿಕೊಂಡಿದ್ದಾಗಿಮೃತರ ಅಣ್ಣ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದಾಗಿದೆ.
ಈ ಬಗ್ಗೆ ಅಜೆಕಾರು ಠಾಣಾ ಯುಡಿಆರ್ ಕ್ರಮಾಂಕ16/2025 U/s 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.