ಉಡುಪಿ : ಕುಂಜಿಬೆಟ್ಟು ಹಾಸ್ಟೆಲ್ ನಿಂದ ಬಾಲಕನೊಬ್ಬ ನಾಪತ್ತೆಯಾಗಿರುವ ಬಗ್ಗೆ ಉಡುಪಿಯ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.
ಕುಂಜಿಬೆಟ್ಟು ಮಾಧವ ನಿಲಯ ಹಾಸ್ಟೆಲ್ ನ ನಿವಾಸಿ 15 ವರ್ಷದ ಪ್ರಫುಲ್ ದ್ಯಾವಣ್ಣವರ್ ನಾಪತ್ತೆಯಾದ ಬಾಲಕ.
ಈತ ತಾಯಪ್ಪ ದ್ಯಾವಣ್ಣವರ್ ಎಂಬವರ ಪುತ್ರ. ಸೆ. 7ರಂದು ಸಂಜೆ 3.55ರಿಂದ ಈತ ನಾಪತ್ತೆಯಾಗಿದ್ದು, ನೀಲಿ ಬಣ್ಣದ ಟಿ ಶರ್ಟ್, ಕಪ್ಪು ಬಣ್ಣದ ಟ್ರ್ಯಾಕ್ ಪ್ಯಾಂಟ್ ಧರಿಸಿದ್ದ. ಈತನ ಸುಳಿವು ಸಿಕ್ಕಲ್ಲಿ ಉಡುಪಿ ಮಹಿಳಾ ಠಾಣೆ ನಂಬರ್ 08202525599, ಕಂಟ್ರೋಲ್ ರೂಮ್ ನಂಬರ್ 08202526444 ಮಾಹಿತಿ ನೀಡುವಂತೆ ತಿಳಿಸಲಾಗಿದೆ.