Home Crime ಬ್ರಹ್ಮಾವರ : ಅಪರಿಚಿತ ಗಂಡಸಿನ ಮೃತದೇಹ ಪತ್ತೆ….!!

ಬ್ರಹ್ಮಾವರ : ಅಪರಿಚಿತ ಗಂಡಸಿನ ಮೃತದೇಹ ಪತ್ತೆ….!!

ಬ್ರಹ್ಮಾವರ : ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪ ಹಾರಾಡಿ ಸೀತಾನದಿಯಲ್ಲಿ ಅಪರಿಚಿತ ಗಂಡಸಿನ ಮೃತದೇಹ ಪತ್ತೆಯಾಗಿದೆ.

ಮೃತಪಟ್ಟ ವ್ಯಕ್ತಿಗೆ 45 ರಿಂದ 50 ಪ್ರಾಯವಾಗಿರಬಹುದು.

ರಾತ್ರಿ ಸಮಯ ಎಲ್ಲಿಯೋ ನದಿಯ ದಡದಲ್ಲಿ ನಿಂತುಕೊಂಡು ಮೀನಿಗೆ ಗಾಳ ಹಾಕುವ ಸಮಯ ಆಕಸ್ಮಿಕವಾಗಿ ಕಾಲು ಜಾರಿ ಅಥವಾ ಇನ್ಯಾವುದೋ ಕಾರಣದಿಂದ ನದಿಯ ನೀರಿಗೆ ಬಿದ್ದು ಮೃತ ಪಟ್ಟಿರಬಹುದು ಎಂದು ಸಂಶಯ ವ್ಯಕ್ತಪಡಿಸಲಾಗಿದೆ.

ಪ್ರಕರಣದ ಸಾರಾಂಶ: ಬ್ರಹ್ಮಾವರ ತಾಲೂಕು ಹಾರಾಡಿ ಗ್ರಾಮದ ಹಾರಾಡಿ ಅಶೋಕ್‌ ‌ ರವರ ಮನೆಯ ಬಳಿಯ ಸೀತಾನದಿಯಲ್ಲಿ ದಿನಾಂಕ 18/06/2025 ರಂದು ಸಂಜೆ 4:30 ಗಂಟೆಗೆ ಸುಮಾರು 45 ರಿಂದ 50 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತ ಶರೀರ ತೇಲಿ ಬಂದಿದ್ದು, ಅಪರಿಚಿತ ವ್ಯಕ್ತಿಯು ದಿನಾಂಕ 17/06/2025 ರಂದು ರಾತ್ರಿ ಸಮಯ ಎಲ್ಲಿಯೋ ನದಿಯ ದಡದಲ್ಲಿ ನಿಂತುಕೊಂಡು ಮೀನಿಗೆ ಗಾಳ ಹಾಕುವ ಸಮಯ ಆಕಸ್ಮಿಕವಾಗಿ ಕಾಲು ಜಾರಿ ಅಥವಾ ಇನ್ಯಾವುದೋ ಕಾರಣದಿಂದ ನದಿಯ ನೀರಿಗೆ ಬಿದ್ದು ಮೃತ ಪಟ್ಟಿರಬಹುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 44/2025 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.