Home Karavali Karnataka ಶಾಸಕರಾದ ಯಶಪಾಲ್ ಸುವರ್ಣ ರವರಿಂದ ಉಡುಪಿ ಮ್ಯಾರಥಾನ್ ಅನಾವರಣ…!!

ಶಾಸಕರಾದ ಯಶಪಾಲ್ ಸುವರ್ಣ ರವರಿಂದ ಉಡುಪಿ ಮ್ಯಾರಥಾನ್ ಅನಾವರಣ…!!

ಉಡುಪಿ : ಉಡುಪಿ ರನ್ನರ್ಸ್ ಕ್ಲಬ್ ರವರ ಬಹು ನಿರೀಕ್ಷಿತ ಎರಡನೇ ಆವೃತ್ತಿಯ ಉಡುಪಿ ಮ್ಯಾರಥಾನ್ 2025 ಇದರ ಲೋಗೋ, ವೆಬ್ ಸೆಟ್ ಹಾಗೂ ಮ್ಯಾರಥಾನ್ ದಿನಾಂಕವನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಶಪಾಲ್ ಸುವರ್ಣರವರು ದಿನಾಂಕ 06.09.2025ರಂದು ಅಧಿಕೃತವಾಗಿ ಅನಾವರಣ ಗೊಳಿಸಿದರು.

2ನೇ ಆವೃತ್ತಿಯ ಉಡುಪಿ ಮ್ಯಾರಥಾನ್ ದಿನಾಂಕ 7.12.2025 ರಂದು ಜರಗಲಿರುವುದು ಎಂದು ಉಡುಪಿ ರನ್ನರ್ಸ್ ಕ್ಲಬ್ ತನ್ನ ಪ್ರಕಟಣೆಯಲ್ಲಿ ತಿಳಿಸಿರುತ್ತದೆ.

ಈ ಅನಾವರಣ ಸಮಾರಂಭದಲ್ಲಿ ಉಡುಪಿ ರನ್ನರ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀ ತಿಲಕ್ ಚಂದ್ರ ಪಾಲ್, ಉಪಾಧ್ಯಕ್ಷರಾದ ಉದಯಕುಮಾರ್ ಶೆಟ್ಟಿ, ಕಾರ್ಯದರ್ಶಿ ಶ್ರೀ ದಿವಾಕರ ಗಣಪತಿ ನಾಯಕ್, ಕೋಶಾಧಿಕಾರಿ ಶ್ರೀ ಸತೀಶ್ ಸಾಲ್ಯಾನ್ ಮಲ್ಪೆ, ಜೊತೆ ಕಾರ್ಯದರ್ಶಿ ಹಾಗೂ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು.