ಬೈಂದೂರು : ಬೊಲೆರೋ ಪಿಕಪ್ ವಾಹನವೊಂದು ರಿಕ್ಷಾಕ್ಕೆ ಡಿಕ್ಕಿ ಹೊಡೆದು ಶಿರೂರಿನ ರಿಕ್ಷಾ ಚಾಲಕ ಸ್ಥಳದಲ್ಲೆ ಮೃತಪಟ್ಟ ಘಟನೆ ಶನಿವಾರ ಮದ್ಯಾಹ್ನ ಶಿರೂರು ಕೆಳಪೇಟೆಯಲ್ಲಿ ನಡೆದಿದೆ.
ಶಿರೂರು ಗ್ರಾಮದ ಹಡವಿನಕೋಣೆ ನ್ಯೂ ಕಾಲೋನಿ ನಿವಾಸಿ ಕರಾ ಮಹಮ್ಮದ್ ಇಲಿಯಾಸ್(49) ಮೃತಪಟ್ಟ ಚಾಲಕನಾಗಿದ್ದಾನೆ ಎಂದು ತಿಳಿದು ಬಂದಿದೆ.
ಮಲ್ಪೆಯಿಂದ ಭಟ್ಕಳ ಕಡೆಗೆ ಸಾಗುತ್ತಿದ್ದ ಮೀನಿನ ವಾಹನ ಶಿರೂರು ಮಾರ್ಕೆಟ್ ಕಡೆಗೆ ಸಾಗುತ್ತಿದ್ದ ಆಟೋ ರಿಕ್ಷಾಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ರಿಕ್ಷಾ ಡಿಕ್ಕಿಯಾದ ರಭಸಕ್ಕೆ ರಿಕ್ಷಾ ನಜ್ಜುನುಜ್ಜಾಗಿದ್ದು ರಿಕ್ಷಾ ಚಾಲಕ ಸ್ಥಳದಲ್ಲೆ ಮೃತಪಟ್ಟಿದ್ದಾನೆ.ಪಿಕಪ್ ವಾಹನ ಅತೀ ವೇಗದ ಅಜಾಗರೂಕತೆಯಿಂದ ಅವಾಂತರಕ್ಕೆ ಕಾರಣವಾಗಿದೆ.
ಬೈಂದೂರು ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಘಟನೆ ಸ್ಥಳಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






