ಮಂಗಳೂರು : ನಗರದ ಸಮೀಪ ಮದುವೆಯಾದ ಯುವತಿಯೊಬ್ಬಳು ನಾಪತ್ತೆಯಾದ ಘಟನೆ ನಡೆದಿದೆ.
ನಾಪತ್ತೆಯಾದ ಯುವತಿ ನಾಗಭೂಷಣ್ ಸ್ವಾಮಿಯವರ ಮಗಳಾದ ಅಶ್ವಿನಿ ಎಂದು ತಿಳಿದು ಬಂದಿದೆ.
ಮಂಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ಸಾರಾಂಶ : ಪಿರ್ಯದಿ Nagabhushan Swami ದಾರರ ಮಗಳು ಅಶ್ವಿನಿ (21ವ) ಎಂಬಾಕೆಯು ಕಳೆದ 1 ವರ್ಷಗಳ ಹಿಂದೆ ಇನ್ ಸ್ಟಾಗ್ರಾಂ ನಲ್ಲಿ ಚಿಕ್ಕಬಳ್ಳಾಪುರದ ಸಿದ್ಲಗಟ್ಟೆ ಎಂಬಲ್ಲಿನ ಮಹೇಶ್ ಎಂಬಾತನ ಜೊತೆ ಪರಿಚಯವಾಗಿ ಚಾಟಿಂಗ್ ಹಾಗೂ ಮಾತುಕತೆ ನಡೆಸುತ್ತಿದ್ದಳು. ಹೀಗೆ ಪರಿಚಯವಾದ ವ್ಯಕ್ತಿಯ ಬಗ್ಗೆ ಪಿರ್ಯಾದಿದಾರರು ವಿಚಾರಿಸಿದಾಗ, ತಾನು ಆತನೊಂದಿಗೆ ವಿವಾಹವಾಗಿ ಜೀವನ ಸಾಗಿಸುತ್ತೇನೆ ಎಂದು ಹೇಳಿ ಕಳೆದ ಒಂದು ವರ್ಷದ ಹಿಂದೆ ಆತನೊಂದಿಗೆ ಹೊರಟು ಹೋಗಿದ್ದು, ಹಾಗೆ ಹೋದವಳು ಕಳೆದ ಒಂದು ತಿಂಗಳಿನಿಂದ ಪಿರ್ಯಾದಿದಾರರಿಗೆ ಕರೆ ಮಾಡಿ ನನ್ನನ್ನು ಇಲ್ಲಿ ಸರಿಯಾಗಿ ನೋಡಿಕೊಳ್ಳುವುದಿಲ್ಲ ನಾನು ಮನೆಗೆ ಬರಲು ನೋಡುತ್ತೇನೆ. ನನಗೆ ಬರಲು ಆಗದೇ ಇದ್ದಲ್ಲಿ ನನ್ನನ್ನು ಕರೆದುಕೊಂಡು ಹೋಗಿ ಎಂದು ಹೇಳಿದ್ದವಳು ದಿನಾಂಕ: 01-09-2025 ರಂದು ರಾತ್ರಿ ಸುಮಾರು 11.30 ಗಂಟೆಗೆ ಮನೆಗೆ ಬಂದಿದ್ದು ಆಕೆಯನ್ನು ವಿಚಾರಿಸಿದಾಗ ಮಹೇಶ ನು ಆಕೆಯನ್ನು ಮದುವೆಯಾಗದೇ ಇದ್ದು, ಆತನ ತಂದೆ ತಾಯಿ ಯವರೊಂದಿಗೆ ಅವರ ಮನೆಯಲ್ಲೇ ಇದ್ದುದಾಗಿಯೂ ಆಕೆಯನ್ನು ಅವರು ಕೆಲಸಕ್ಕೆ ಕಳುಹಿಸಿರುತ್ತಾರೆ. ಎಂದು ತಿಳಿಸಿರುತ್ತಾಳೆ. ದಿನಾಂಕ:02-09-2025 ರಂದು ಹಗಲು ಮನೆ Bandottum Gurunagara, Mangaluru City ಯಲ್ಲೇ ಇದ್ದು ರಾತ್ರಿ ಊಟ ಮಾಡಿ ಮಲಗಿದ್ದವಳು. ಈ ದಿನ ಬೆಳಗ್ಗಿನ ಜಾವ 4.00 ಗಂಟೆಗೆ ಮನೆಯಲ್ಲಿ ಮಲಗಿದ್ದ ಅಶ್ವಿನಿಯು ಮನೆಯಿಂದ ಎದ್ದು ಹೋಗಿರುವುದು ತಿಳಿದು ಬಂತು. ಪಿರ್ಯಾದಿದಾರರು ಆಕೆಗೆ ಮತ್ತು ಮಹೇಶ್ ನಿಗೆ ಫೋನ್ ಮಾಡಿದಾಗ ಸ್ವಿಚ್ ಆಫ್ ಬರುತ್ತಿದ್ದು, ಕಾಣೆಯಾದ ಅಶ್ವಿನಿ ಯನ್ನು ಪತ್ತೆ ಮಾಡಿಕೊಡಬೇಕಾಗಿ ಕೋರಿಕೆ ಎಂಬಿತ್ಯಾದಿ.