Home Crime ಬ್ರಹ್ಮಾವರ : ಪೊಲೀಸರಿಂದ ಕೋಳಿ‌ ಅಂಕಕ್ಕೆ ದಾಳಿ…!!

ಬ್ರಹ್ಮಾವರ : ಪೊಲೀಸರಿಂದ ಕೋಳಿ‌ ಅಂಕಕ್ಕೆ ದಾಳಿ…!!

ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪ ಅಕ್ರಮವಾಗಿ ‌ಕೋಳಿ ಅಂಕ ನಡೆಯುತ್ತಿದ್ದ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.

ಬ್ರಹ್ಮಾವರ ಪೊಲೀಸರು ದಾಳಿ ನಡೆಸುವಾಗ ಆರೋಪಿಗಳು ಪರಾರಿಯಾಗಿದ್ದಾರೆ. ಪೊಲೀಸರು ಕೋಳಿ ಅಂಕಕ್ಕೆ ಬಳಸಿದ್ದ  ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣದ ವಿವರ :  ದಿನಾಂಕ 09/09/2025 ರಂದು ಸುದರ್ಶನ ದೊಡಮನಿ, ಪೊಲೀಸ್‌ ಉಪನಿರೀಕ್ಷಕರು(ತನಿಖೆ), ಬ್ರಹ್ಮಾವರ ಪೊಲೀಸ್ ಠಾಣೆ ಇವರು ರೌಂಡ್ಸ್ ಕರ್ತವ್ಯದಲ್ಲಿರುವಾಗ ಹಾವಂಜೆ ಗ್ರಾಮದ ಮುಗ್ಗೇರಿ ಎಂಬಲ್ಲಿನ ಸರಕಾರಿ ಹಾಡಿಯಲ್ಲಿ ಕೆಲವು ಜನರು ಸೇರಿಕೊಂಡು ಹಿಂಸಾತ್ಮಕವಾಗಿ ಕೋಳಿಗಳ ಕಾಲಿಗೆ ಕತ್ತಿಯನ್ನು ಕಟ್ಟಿ ಕೋಳಿ ಅಂಕವನ್ನು ಆಡುತ್ತಿದ್ದಾರೆ ಎಂಬುದಾಗಿ ಬಂದ ಮಾಹಿತಿಯಂತೆ ದಾಳಿ ನಡೆಸಿದ್ದು ಸ್ಥಳದಲ್ಲಿ KA-20-EZ-1041 ನೇ ಸ್ಕೂಟರ್, KA-18-EE-667 ಮೋಟರ್ ಸೈಕಲ್, KA-20-ER-3689 ಮೋಟರ್ ಸೈಕಲ್, MH-02-AN-7348 ಮೋಟರ್ ಸೈಕಲ್ ಬಿಟ್ಟು ಜನರು ಓಡಿಹೋಗಿದ್ದು, ಆರೋಪಿತರು ಆಟಕ್ಕೆ ಬಳಸಿದ 3 ಕೋಳಿಗಳು, ಕೋಳಿಗಳ ಕಾಲಿಗೆ ಕಟ್ಟಿದ 2 ಕೋಳಿ ಬಾಳ್, ಕೋಳಿಯ ಕಾಲಿಗೆ ಕಟ್ಟಿದ 2 ನೈಲಾನ್ ಹಗ್ಗ ಹಾಗೂ 04 ವಾಹನಗಳನ್ನು ವಶಪಡಿಸಿಕೊಂಡಿರುವುದಾಗಿದೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 185/2025 ಕಲಂ: 87, 93 KP Act, ಕಲಂ: 11 Prevention of Cruelty to Animals Act ರಂತೆ ಪ್ರಕರಣ ದಾಖಲಾಗಿರುತ್ತದೆ.