Home Karnataka News 293 ಪೊಲೀಸ್ ಇನ್‍ಸ್ಪೆಕ್ಟರ್‌ಗಳ ವರ್ಗಾವಣೆ…!!

293 ಪೊಲೀಸ್ ಇನ್‍ಸ್ಪೆಕ್ಟರ್‌ಗಳ ವರ್ಗಾವಣೆ…!!

‎ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಲಾಗಿದ್ದು, ಪೊಲೀಸ್ ಇನ್‍ಸ್ಪೆಕ್ಟರ್ (ಸಿವಿಲ್)ಗಳಾದ ಸುರೇಶ್ ಎಚ್.ವಿ., ಅರ್ಜುನ್ ಸಿ.ಆರ್., ಅನಿತಾ ಕುಮಾರಿ ಎಂ., ಕುಮಾರಸ್ವಾಮಿ ಬಿ.ಜಿ. ಸೇರಿದಂತೆ 293 ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ರವಿವಾರ ಪೊಲೀಸ್ ಇಲಾಖೆ ಈ ಆದೇಶವನ್ನು ಹೊರಡಿಸಿದ್ದು, ಸಿಐಡಿ ವಿಭಾಗಕ್ಕೆ ಸುರೇಶ್ ಎಚ್.ವಿ., ಬನಶಂಕರಿ ಪೊಲೀಸ್ ಠಾಣೆಗೆ ಅರ್ಜುನ್ ಸಿ.ಆರ್., ಆಂತರಿಕ ಭದ್ರತಾ ವಿಭಾಗಕ್ಕೆ ಅನಿತಾ ಕುಮಾರಿ ಎಂ., ಲೋಕಾಯುಕ್ತಕ್ಕೆ ಕುಮಾರಸ್ವಾಮಿ ಬಿ.ಜಿ. ಅವರುಗಳು ಸೇರಿದಂತೆ ವಿವಿಧ ಸ್ಥಳಗಳಿಗೆ ಒಟ್ಟಾರೆ 293 ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ನಿಯುಕ್ತಿಗೊಳಿಸಲಾದ ಸ್ಥಳಗಳಲ್ಲಿ ಕೂಡಲೇ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಆದೇಶದಲ್ಲಿ ಸೂಚಿಸಲಾಗಿದೆ.