ಹಿರಿಯಡ್ಕ : ಉಡುಪಿ ಜಿಲ್ಲೆಯ ಹಿರಿಯಡ್ಕ ಸಮೀಪ ಹಂದಿಯ ಬೇಟೆ ವೇಳೆ ಗುರಿ ತಪ್ಪಿದ ಬಂದೂಕಿನ ಗುಂಡು ಕಾರು ಹಾಗೂ ಮನೆಯ ಬಾಗಿಲಿಗೆ ಬಡಿದ ಘಟನೆ ಆ.31ರಂದು ಮಧ್ಯರಾತ್ರಿ ವೇಳೆ ಕಣoಜಾರು ಬ್ರಹ್ಮಲಿಂಗೇಶ್ವರ ದೇವಸ್ಥಾನ ಸಮೀಪ ಸಂಭವಿಸಿದೆ.
ಅಪರಿಚಿತರು ಕಾಡುಪ್ರಾಣಿ ಬೇಟೆ ಮಾಡುವ ವೇಳೆ ಬಂದೂಕಿನಿಂದ ಗುಂಡು ಹಾರಿಸಿದ್ದು, ಗುಂಡು ಗುರು ತಪ್ಪಿ ಅಲ್ಲೇ ಸಮೀಪದ ಗುರುರಾಜ ಮಂಜಿತ್ತಾಯ ಎಂಬವರ ಮನೆಯ ಎದುರು ನಿಲ್ಲಿಸಿದ್ದ ಕಾರಿಗೆ ಅಡ್ಡದಿಂದ ತಾಗಿ ಮುಂದೆ ಮನೆಯ ಮರದ ಬಾಗಿಲಿಗೆ ಬಡಿದಿರುವುದು ಕಂಡು ಬಂದಿದೆ.
ಈ ಕುರಿತು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

